ಬೆಳಗಾವಿಯಲ್ಲಿ ಭೀಕರ ಘಟನೆ; ಕೃತ್ಯ ಬಳಿಕ ‘ಜೈಲು-ಬೇಲ್’ ಸ್ಟೇಟಸ್ ಹಾಕಿದ ಆರೋಪಿ.!
ಬೆಳಗಾವಿ: ಸಣ್ಣ ಕಾರಣಕ್ಕಾಗಿ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಅರವಿಂದ ಗವಳಿ ಎಂಬಾತ, ವಿಡಿಯೋ ಕಾಲ್ನಲ್ಲಿ ಮಗು ತೋರಿಸಿಲ್ಲವೆಂದು ಸಿಟ್ಟಿಗೆದ್ದು ಅತ್ತೆ ಮಹಾದೇವಿ (45) ಅವರಿಗೆ ಹಲ್ಲೆ ನಡೆಸಿದ್ದಾನೆ. ಅರವಿಂದನ ಪತ್ನಿ ಇತ್ತೀಚೆಗೆ ಹೆರಿಗೆಯಾಗಿ ತವರು ಮನೆಯಲ್ಲಿ ಇದ್ದಳು. ಈ ವೇಳೆ ಪದೇಪದೇ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದನು. ಇದಕ್ಕೆ ಅತ್ತೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ಕೋಪಗೊಂಡ ಅರವಿಂದ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಾದೇವಿ ಅವರನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಆರೋಪಿ ‘ಇಂದು ಜೈಲು, ನಾಳೆ ಬೇಲ್’ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರುವುದು ಗಮನಾರ್ಹ. ಮುರಗೋಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




