ಕೆರೆಯಲ್ಲಿ ಮುಳುಗಿ ದಾರುಣ ಅಂತ್ಯ; ರಾಜ್ಯದ ವಿವಿಧೆಡೆ ನೀರಿನಲ್ಲಿ ಅಪಘಾತಗಳು.!
ಚಿಕ್ಕಮಗಳೂರು: ಜಿಲ್ಲೆಯ ಅರಳುಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಅಬ್ದುಲ್ ರೆಹಮಾನ್ (9), ನಯಾಜ್ (12), ಮದಿನಾ ಬಾನು (9) ಮತ್ತು ಆರುನ್ (8) ಮೃತರು. ಕೆರೆಯಲ್ಲಿ ಆಟವಾಡಲು ತೆರಳಿದ್ದ ವೇಳೆ, ನೀರಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಮುಂದಾದ ಮಕ್ಕಳು ದುರಂತಕ್ಕೀಡಾದರು. ಅರ್ಮನ್ ಎಂಬ ಬಾಲಕ ಬದುಕುಳಿದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದೇ ವೇಳೆ ವಿಜಯನಗರ ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ 16 ವರ್ಷದ ಜೀವನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ನೆಲಮಂಗಲದಲ್ಲಿ ಬೈಕ್ ಅಪಘಾತದಲ್ಲಿ ಯುವಕ ಪ್ರಶಾಂತ್ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ.ರಾಜ್ಯದ ವಿವಿಧೆಡೆ ನಡೆದ ಈ ದುರಂತಗಳು ಆತಂಕ ಹುಟ್ಟಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
For More Updates Join our WhatsApp Group :




