ಹೆಸರಘಟ್ಟದಲ್ಲಿ ಕೃಷಿ ಕ್ರಾಂತಿ: ಹೊಸ ಹಣ್ಣು ತಳಿಗಳಿಂದ ರೈತರಿಗೆ ಹೆಚ್ಚಿನ ಲಾಭದ ನಿರೀಕ್ಷೆ
ಬೆಂಗಳೂರು : ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿ, ಇಳುವರಿ ಹೆಚ್ಚಾಗಿ ರೈತರ ಆದಾಯ ದ್ವಿಗುಣಗೊಳಿಸಬಲ್ಲ ನೆರಳೆ ತಳಿ ‘ಅರ್ಕ ಜಾಮುನ್ ಪ್ರೈಡ್’ ಮತ್ತು ಚಕೋತ್ರ (ಪಮ್ಮೇಳೋ) ತಳಿ ‘ಅರ್ಕ ಶಿವ’ ಅನ್ನು ‘ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್’ ಮಹಾನಿರ್ದೇಶಕ ಡಿಎಆರ್ಇ ಕಾರ್ಯದರ್ಶಿ ಡಾ.ಎಂ. ಎಲ್. ಜಾಟ್ ಬಿಡುಗಡೆಗೊಳಿಸಿದರು.
ಇಂದು ಬುಧವಾರ ಬೆಂಗಳೂರಿನ ಹೆಸರಘಟ್ಟದ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಸಂಶೋಧನಾ ಚಟುವಟಿಕೆಗಳು, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಹೊಸ ಹಣ್ಣುಗಳ ತಳಿ ಲೋಕಾರ್ಪಣೆ ಮಾಡಿದರು.
ಬಿಡುಗಡೆಗೊಂಡ ಈ ತಳಿಗಳು ಉತ್ತಮ ಹಣ್ಣಿನ ಗುಣಮಟ್ಟ ಮತ್ತು ಉತ್ತಮ ಮಾರುಕಟ್ಟೆ ಸ್ವೀಕಾರಾರ್ಹತೆಯನ್ನು ಹೊಂದಿವೆ. ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.
154 ತಂತ್ರಜ್ಞಾನ ಅಭಿವೃದ್ಧಿ
ಐಸಿಎಆರ್-IIHR ಸಂಸ್ಥೆ ಸ್ಥಾಪನೆಯಿಂದ ಇದುವರೆಗೆ 335 ಜಾತಿಗಳು, 154 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. 2021-26 ಅವಧಿಯಲ್ಲಿ 59 ಸುಧಾರಿತ ಜಾತಿಗಳು ಮತ್ತು ಸಂಕರಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ತಂತ್ರಜ್ಞಾನಗಳು ದೇಶದಾದ್ಯಂತ ವ್ಯಾಪಕವಾಗಿ ಹರಡಿದೆ. ವಾಣಿಜ್ಯಕರಣಕ್ಕಾಗಿ 1700ಕ್ಕೂ ಹೆಚ್ಚು ಪರವಾನಗಿಗಳನ್ನು ನೀಡಲಾಗಿದೆ. ಇದರ ಮೂಲಕ ತೋಟಗಾರಿಕಾ ಉದ್ಯಮಶೀಲತೆ ಮತ್ತು ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಮಹತ್ವದ ಬೆಂಬಲ ಒದಗಿಸಲಾಗಿದೆ.
For More Updates Join our WhatsApp Group :




