ಯುದ್ದ ಮುಗಿಯದ ಹಿನ್ನೆಲೆಯಲ್ಲಿ ಪ್ರಧಾನಿ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ: ಬಸವರಾಜ ಬೊಮ್ಮಾಯಿ

ಯುದ್ದ ಮುಗಿಯದ ಹಿನ್ನೆಲೆಯಲ್ಲಿ ಪ್ರಧಾನಿ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ:ಬಸವರಾಜ ಬೊಮ್ಮಾಯಿ

ಗದಗ: ಇಸ್ರೇಲ್, ಅಮೇರಿಕಾ, ಇರಾನ್ ಯುದ್ದ ಮುಗಿಯದ ಕಾರಣ  ಮುಂಜಾಗ್ರತಾ ಕ್ರಮವಾಗಿ  ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡಿಸೆಲ್ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್ ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ನವರಿಗೆ ಜನ ಮಾನಸದಲ್ಲಿ  ದೇಶ ಭಕ್ತಿ ಆಳವಾಗಿ ಊರಿದೆ ಎಂಬುದು ಗೊತ್ತಿಲ್ಲ ವಿರೋಧ ಮಾಡುವುದರ ಸಲುವಾಗಿ ವಿರೋಧ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

 ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಂತರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಇಸ್ರೇಲ್, ಅಮೇರಿಕಾ ಯುದ್ದ  ನಡೆಯುತ್ತಿದೆ. ಗಲ್ಫ್  ರಾಷ್ಟ್ರದ ಯುದ್ದ ಮುಗಿಯುವಂತೆ ಕಾಣುತ್ತಿಲ್ಲ. ಉಕ್ರೇನ್ ರಷ್ಯಾ ಯುದ್ದ ಆದಾಗ ಬಹಳಷ್ಟು ಸಮಸ್ಯೆ ಆಗಿತ್ತು. ರಸಗೊಬ್ಬರ ಕಚ್ಚಾವಸ್ತುಗಳ ಸಮಸ್ಯೆ ಆಗಿತ್ತು. ಈಗ ಪೆಟ್ರೋಲ್, ಡಿಸೇಲ್, ಆಯಿಲ್ ಸಮಸ್ಯೆ ಆಗುತ್ತಿದೆ. ಇರಾನ್ ದೇಶದ ಮೇಲೆ ಅವಲಂಬಿತವಾಗಿದೇವೆ. ಇಷ್ಟು ದಿನ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಉಪಯೋಗಿಸಿ ಕಳೆದ ಎರಡು ತಿಂಗಳು ಪೆಟ್ರೋಲ್ ಡಿಸೇಲ್,. ಸುಲಭವಾಗಿ ಮಾಡಬಹುದಾಗಿದೆ. ಬಂಗಾರ ಖರೀದಿ ಮಾಡುವದ್ರಿಂದ ವಿದೇಶಿ ತೆರಿಗೆ ಹೊಡೆತ ಬೀಳುತ್ತಿದೆ. ಹೀಗಾಗಿ ಒಂದು ವರ್ಷ ಬಂಗಾರ ಖರೀದಿ ನಿಲ್ಲಿಸಿದದಿದ್ದರೆ ಏನೂ ಆಗುವುದಿಲ್ಲ. ಇನ್ನು ಪೆಟ್ರೋಲ್ ಡಿಸೇಲ್ ಮಿತವ್ಯಯವಾಗಿ ಬಳಕೆ ಮಾಡಬೇಕು. ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡಿ ಎಂದಿದ್ದಾರೆ. ಇನ್ನು ವಿದೇಶ ಪ್ರಯಾಣ ಸಹ ಕಡಿಮೆ ಮಾಡಬೇಕು ಎಂದಿದ್ದಾರೆ ದೇಶಕ್ಕಾಗಿ ಇಷ್ಟಾದರೂ ನಾವು ಮಾಡಬೇಕಿದೆ ಎಂದು ಹೇಳಿದರು.

For More Updates Join our WhatsApp Group : 

https://chat.whatsapp.com/JVoHqE476Wn3pVh1gWNAcH

                                   

Leave a Reply

Your email address will not be published. Required fields are marked *