ರಾಜ್ಯಾದ್ಯಂತ ಹೊಸ ಅಬಕಾರಿ ನೀತಿ ಜಾರಿ: ಮದ್ಯದ ಬೆಲೆಯಲ್ಲಿ ಭಾರೀ ಬದಲಾವಣೆ..
ಬೆಂಗಳೂರು: ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದು, ಆಲ್ಕೋಹಾಲ್ ಇನ್ ಬೇವರೇಜ್ ಆಧರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಿದೆ.
ಈ ಹೊಸ ನೀತಿ ಇಂದಿನಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ. : ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ ಬಲ್ಕ್ ಲೀಟರ್ ಆಧರಿತ ತೆರಿಗೆ ವ್ಯವಸ್ಥೆಗೆ ತೆರೆ ಬೀಳಲಿದೆ. ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಬಲ್ಕ್ ಆಧರಿತ ತೆರಿಗೆ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯವಾಗಿದೆ.
ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಆಲ್ಕೋಹಾಲ್ ಇನ್ ಬೇವರೇಜ್ – ವಿವಿಧ ಮದ್ಯದಲ್ಲಿನ ಮದ್ಯದ ಪ್ರಮಾಣ ಆಧರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಈ ಹೊಸ ನೀತಿಯು ಇಂದಿನಿಂದ ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿರುವ ಬಲ್್ಕ ಲೀಟರ್ ಆಧರಿತ ತೆರಿಗೆ ಪದ್ಧತಿ ವ್ಯವಸ್ಥೆಯು ಮುಗಿಯಲಿದೆ. ಇದೀಗ ದೇಶದಲ್ಲೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಪದ್ಧತಿ ಜಾರಿಗೆ ಬರುತ್ತಿದೆ. ಆದರೆ, ಈ ಪದ್ಧತಿಯಿಂದ ಮದ್ಯ ಪ್ರಿಯರಿಗೆ ಇನ್ನಷ್ಟು ಬೆಲೆ ಏರಿಕೆ ಆಗಲಿದೆ. ಕರ್ನಾಟಕದಲ್ಲಿ ಈಗಾಗಲೇ ಮದ್ಯದ ಬೆಲೆಯು ದುಬಾರಿಯಾಗಿದೆ.

ಸರ್ಕಾರವು ಏಪ್ರಿಲ್ 18ರಂದು ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಬಂದ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು-2026 ಅನ್ನು ಅಂತಿಮಗೊಳಿಸಲಾಗಿತ್ತು.
ಹೊಸ ನೀತಿಯ ಪ್ರಕಾರ, ಬ್ರಾಂಡಿ, ವಿಸ್ಕಿ, ರಮ್, ಜಿನ್, ಬಿಯರ್, ವೈನ್ ಸೇರಿದಂತೆ ವಿವಿಧ ಮದ್ಯಗಳಲ್ಲಿ ಇರುವ ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಸ್ಲ್ಯಾಬ್ಗಳನ್ನು ಕಡಿತಗೊಳಿಸಿ ಕೇವಲ 8 ಸ್ಲ್ಯಾಬ್ಗಳಿಗೆ ಸೀಮಿತಗೊಳಿಸಲಾಗಿದೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH



