AI ಕ್ಯಾಮೆರಾ ನಿಗಾ ಮೂಲಕ ಏರ್ಸೈಡ್ ಭದ್ರತೆ ಹೆಚ್ಚಳ; ಅಪಘಾತಗಳಿಗೆ ಬ್ರೇಕ್
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಪ್ರಯಾಣಿಕರ ಮತ್ತು ವಿಮಾನಗಳ ಸುರಕ್ಷತೆಗೆ ಹೊಸ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ‘ಸ್ಮಾರ್ಟ್ ಏರ್ಸೈಡ್ ಸೇಫ್ಟಿ ಸಿಸ್ಟಂ’ ಅನ್ನು ಅಳವಡಿಸಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದೆ.
ಏರ್ಸೈಡ್ ಪ್ರದೇಶದಲ್ಲಿ ವಿಮಾನಗಳು ಹಾಗೂ ಸಿಬ್ಬಂದಿ ವಾಹನಗಳು ಒಂದೇ ಸಮಯದಲ್ಲಿ ಸಂಚರಿಸುವುದರಿಂದ ಅಪಘಾತದ ಸಾಧ್ಯತೆ ಹೆಚ್ಚಿತ್ತು. ಇದನ್ನು ನಿಯಂತ್ರಿಸಲು ಈಗ AI ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆ ವಾಹನಗಳ ಚಲನವಲನವನ್ನು ಗಮನಿಸಿ ಅಪಾಯ ಕಂಡುಬಂದರೆ ತಕ್ಷಣ ಎಚ್ಚರಿಕೆ ನೀಡುತ್ತದೆ.
ರಾತ್ರಿ ಹಾಗೂ ಮಂಜು ಮುಸುಕಿದ ಪರಿಸ್ಥಿತಿಗಳಲ್ಲಿಯೂ ಈ ತಂತ್ರಜ್ಞಾನ ನಿಖರವಾಗಿ ಕಾರ್ಯನಿರ್ವಹಿಸಿ, ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ವಿಮಾನಗಳ ಸಮಯಪಾಲನೆಗೂ ಅನುಕೂಲವಾಗಲಿದೆ. 2024-25ರಲ್ಲಿ 4.18 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡಿರುವ KIA, ಈಗ ಮತ್ತಷ್ಟು ಸುರಕ್ಷಿತ ಹಾಗೂ ತಂತ್ರಜ್ಞಾನಾಧಾರಿತ ವ್ಯವಸ್ಥೆಯತ್ತ ಹೆಜ್ಜೆ ಇಟ್ಟಿದೆ.
For More Updates Join our WhatsApp Group :




