ಗ್ಯಾಸ್ ಬಂಕ್‌ಗಳ ಮುಂದೆ ಆಟೊ ಚಾಲಕರ ಪರದಾಟ.!

ಗ್ಯಾಸ್ ಬಂಕ್‌ಗಳ ಮುಂದೆ ಆಟೊ ಚಾಲಕರ ಪರದಾಟ.!

ಎಲ್‌ಪಿಜಿ ಕೊರತೆಯಿಂದ ದೀರ್ಘ ಸಾಲು – ಜೀವನಕ್ಕೆ ಹೊಡೆತ.

ಬೆಂಗಳೂರು: ‘ಬೆಳಿಗ್ಗೆ 7 ಗಂಟೆಗೆ ಬಂದು ಗ್ಯಾಸ್ ಬಂಕ್ ‌ಮುಂದೆ ನಿಂತಿದ್ದೇನೆ. 5 ಲೀಟರ್ ಹಾಕಿಸಿಕೊಳ್ಳಲು 3ರಿಂದ 4 ತಾಸು ಕಾಯಬೇಕು. ಕೆಲ ಆಟೊ ಚಾಲಕರು ಬೆಳಿಗ್ಗೆ 6 ಗಂಟೆಗೆ ಬಂದು ನಿಂತಿದ್ದಾರೆ. ಪರಿಸ್ಥಿತಿ ಹೀಗಾದರೆ ಜೀವನ ನಡೆಸುವುದಾದರೂ ಹೇಗೆ’?

ಬೆಂಗಳೂರಿನ ಆಟೊ ಚಾಲಕರು ದೈನಂದಿನ ಜೀವನ ನಡೆಸಲು ಪರದಾಡುತ್ತಿದ್ದು, ಗ್ಯಾಸ್ ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಸಾಲುಗಟ್ಟುವಂತಾಗಿದೆ.ಪ್ರಮುಖ ಮುಖ್ಯಾಂಶಗಳು• ಆಟೊ ಚಾಲಕರ ನಿತ್ಯದ ಪರದಾಟಎಲ್‌ಪಿಜಿಗಾಗಿ ಆಟೊ ಚಾಲಕರು ಬೆಳಗಿನ ಜಾವದಿಂದಲೇ ಗ್ಯಾಸ್ ಬಂಕ್‌ಗಳ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುತ್ತಿದ್ದು, ಇದರಿಂದ ಅವರ ದೈನಂದಿನ ದುಡಿಮೆಗೆ ಭಾರಿ ಹೊಡೆತ ಬಿದ್ದಿದೆ.• ಬಂಕ್‌ಗಳ ಬಾಗಿಲು ಬಂದ್ನಗರದಲ್ಲಿ ಸುಮಾರು ಶೇ 50ರಷ್ಟು ಗ್ಯಾಸ್ ಬಂಕ್‌ಗಳು ದಾಸ್ತಾನು ಇಲ್ಲದ ಕಾರಣ ಬಾಗಿಲು ಮುಚ್ಚಿದ್ದು, ಉಳಿದ ಬಂಕ್‌ಗಳಲ್ಲಿ ಭಾರಿ ದಟ್ಟಣೆ ಉಂಟಾಗಿದೆ.• ಗಗನಕ್ಕೇರಿದ ಎಲ್‌ಪಿಜಿ ದರಸರ್ಕಾರಿ ಬಂಕ್‌ಗಳಲ್ಲಿ ಲೀಟರ್‌ಗೆ ₹90ರ ವರೆಗೂ ಹಾಗೂ ಖಾಸಗಿ ಬಂಕ್‌ಗಳಲ್ಲಿ ₹120ರ ವರೆಗೂ ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದು, ಚಾಲಕರ ಆರ್ಥಿಕ ಹೊರೆಯು ಹೆಚ್ಚಾಗಿದೆ.• ಪೂರೈಕೆಯಲ್ಲಿ ಭಾರಿ ಕುಸಿತಯುದ್ಧದ ಪರಿಣಾಮವಾಗಿ ಎಲ್‌ಪಿಜಿ ಪೂರೈಕೆಯು ನಾಲ್ಕು ಟನ್‌ನಿಂದ ಎರಡು ಟನ್‌ಗೆ ಇಳಿಕೆಯಾಗಿದ್ದು, ಈ ಕೊರತೆಯು ಚಾಲಕರ ಸಂಕಷ್ಟಕ್ಕೆ ಮುಖ್ಯ ಕಾರಣವಾಗಿದೆ.• ಸರ್ಕಾರದ ನೆರವಿಗಾಗಿ ಮನವಿಸಂಕಷ್ಟದಲ್ಲಿರುವ ಚಾಲಕರಿಗೆ ತಿಂಗಳಿಗೆ ₹15,000 ಪರಿಹಾರ ಒದಗಿಸಬೇಕು ಮತ್ತು ಅಕ್ರಮವಾಗಿ ಹೆಚ್ಚಿನ ದರ ವಿಧಿಸುವ ಬಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚಾಲಕರ ಸಂಘಟನೆಗಳು ಒತ್ತಾಯಿಸಿವೆ.

‘ಎಲ್‌ಪಿಜಿ ಸಿಲಿಂಡರ್‌ಗಳನ್ನು ಸರ್ಕಾರ ನಿಗದಿ ಮಾಡಿರುವ ದರದಲ್ಲೇ ವಿತರಿಸಬೇಕು. ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಮಾರಿದರೆ, ಅಂತಹ ಕಂಪನಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಆದರೆ, ಲೀಟರ್‌ಗೆ ₹120 ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಇದು ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ’ ಎಂದು ಆಟೊ ಚಾಲಕರು ಅಳಲು ತೊಡಿಕೊಂಡರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *