ಸಾವಿಲ್ಸ್’ ವರದಿ ಬಹಿರಂಗ; ಐಟಿ, ಹೂಡಿಕೆ ಮತ್ತು ವಲಸೆಯಿಂದ ನಗರಕ್ಕೆ ಭಾರೀ ಬಲ
ಬೆಂಗಳೂರು: ಭಾರತದ ಐಟಿ ಹಬ್ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರಕ್ಕೆ ಮತ್ತೊಂದು ಮಹತ್ವದ ಗೌರವ ಸಿಕ್ಕಿದೆ. ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ‘ಸಾವಿಲ್ಸ್’ ವರದಿ ಪ್ರಕಾರ, 2035ರ ವೇಳೆಗೆ ಬೆಂಗಳೂರು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ.
ಈ ಸಾಧನೆಗೆ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳ ಹೆಚ್ಚಳ, ಉನ್ನತ ಐಟಿ ಪ್ರತಿಭೆಗಳು ಮತ್ತು ದೇಶದ ವಿವಿಧ ಭಾಗಗಳಿಂದ ಆಗುತ್ತಿರುವ ವಲಸೆ ಪ್ರಮುಖ ಕಾರಣಗಳಾಗಿವೆ. ಬಹುರಾಷ್ಟ್ರೀಯ ಕಂಪನಿಗಳು ತಂತ್ರಜ್ಞಾನ ಮತ್ತು ಹಣಕಾಸು ಚಟುವಟಿಕೆಗಳಿಗೆ ಬೆಂಗಳೂರನ್ನೇ ಆಯ್ಕೆ ಮಾಡುತ್ತಿವೆ.
ವರದಿ ಪ್ರಕಾರ, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ದೊಡ್ಡ ಬದಲಾವಣೆ ನಿರೀಕ್ಷೆಯಿದ್ದು, ಆಫೀಸ್ ಸ್ಪೇಸ್‌ಗಳಿಗೆ ಬೇಡಿಕೆ ಹೆಚ್ಚಲಿದೆ. ಜೊತೆಗೆ ವಿದೇಶಿ ಹೂಡಿಕೆ ಮತ್ತು ವಸತಿ ಯೋಜನೆಗಳೂ ವೇಗವಾಗಿ ವಿಸ್ತರಣೆಯಾಗಲಿವೆ.ಒಟ್ಟಾರೆ, ಆರ್ಥಿಕತೆ, ತಂತ್ರಜ್ಞಾನ ಮತ್ತು ನಗರಾಭಿವೃದ್ಧಿಯಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬರಲಿದೆ.
For More Updates Join our WhatsApp Group :



