ನವಿಲುಗಳ ಸರಣಿ ಸಾವು: ‘H5N1’ ವೈರಸ್ ದೃಢ.!
ತುಮಕೂರು : ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ 11 ದಿನಗಳಲ್ಲಿ 44 ನವಿಲುಗಳು ಮೃತಪಟ್ಟಿದ್ದು, ಈ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿತ್ತು.ಪ್ರಾರಂಭದಲ್ಲಿ ಅತಿಯಾದ ಬಿಸಿಲು, ನಿರ್ಜಲೀಕರಣವೇ ಸಾವಿಗೆ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಬೊಮ್ಮನಹಳ್ಳಿ, ಮಾಚೇನಹಳ್ಳಿ ಸುತ್ತಮುತ್ತ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.
ಮೃತ ನವಿಲುಗಳ ರಕ್ತ ಮತ್ತು ಅಂಗಾಂಗಗಳ ಮಾದರಿಗಳನ್ನು FSL ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ‘H5N1’ ವೈರಸ್ ಸೋಂಕು ಇರುವುದನ್ನು ದೃಢಪಡಿಸಲಾಗಿದೆ.
ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆ ಜಿಲ್ಲಾಡಳಿತ ಮತ್ತು ಪಶುಸಂಗೋಪನಾ ಇಲಾಖೆ ಹೈ ಅಲರ್ಟ್ ಘೋಷಣೆ ಮಾಡಿವೆ.
ಊರ್ಡಿಗೆರೆ, ಗೂಳೂರು, ಬೊಮ್ಮನಹಳ್ಳಿ, ಟಿ.ಜಿ.ಪಾಳ್ಯ ಸುತ್ತಮುತ್ತ 10 ಕಿ.ಮೀ ಪ್ರದೇಶವನ್ನು ಸೆನ್ಸಿಟಿವ್ ಜೋನ್ ಎಂದು ಘೋಷಿಸಲಾಗಿದೆ. 33 ಹಳ್ಳಿಗಳ ಮೇಲೆ ನಿಗಾ ವಹಿಸಲಾಗಿದೆ.
ಸೋಂಕು ಹರಡುವುದನ್ನು ತಡೆಗಟ್ಟಲು ಗ್ರಾಮಗಳಲ್ಲಿ ಡಿಸ್ಇನ್ಫೆಕ್ಟಂಟ್ ಸ್ಪ್ರೇ ಮಾಡಲು ಸೂಚನೆ ನೀಡಲಾಗಿದೆ.
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಅನಗತ್ಯ ಭೀತಿ ಬೇಡ, ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
For More Updates Join our WhatsApp Group :




