ಜನಗಣತಿ ಕಾರ್ಯದಲ್ಲಿ ಬೀಗ ಹಾಕಿದ ಮತ್ತು ಖಾಲಿ ಮನೆಗಳ ಮರುಪರಿಶೀಲನೆಗೆ ಆಯುಕ್ತರ ಸೂಚನೆ.!

ಜನಗಣತಿ ಕಾರ್ಯದಲ್ಲಿ ಬೀಗ ಹಾಕಿದ ಮತ್ತು ಖಾಲಿ ಮನೆಗಳ ಮರುಪರಿಶೀಲನೆಗೆ ಆಯುಕ್ತರ ಸೂಚನೆ.!

ಬೆಂಗಳೂರು ಉತ್ತರ ಪಾಲಿಕೆಯಲ್ಲಿ ಜನಗಣತಿ ವೇಗ: ಲಾಕ್ ಮತ್ತು ಖಾಲಿ ಮನೆಗಳ ಮರುಪರಿಶೀಲನೆ ಕಡ್ಡಾಯ

ಬೆಂಗಳೂರು:  ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ಅವರು, 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯವನ್ನು ನಿಗದಿತ ದಿನಾಂಕವಾದ 15-05-2026 ರೊಳಗೆ ಸಮಗ್ರವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಎಲ್ಲಾ ಜನಗಣತಿ ಅಧಿಕಾರಿಗಳಿಗೆ ಬೀಗ ಹಾಕಿರುವ (ಲಾಕ್) ಹಾಗೂ ಖಾಲಿ ಮನೆಗಳ ಮರುಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಪ್ರತಿದಿನ ಸಂಜೆ ಹಾಗೂ ರಜಾದಿನಗಳಲ್ಲಿ ವಿಶೇಷ “ಮಾಪ್-ಅಪ್ ರೌಂಡ್” ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದ್ದು, ಬೀಗ ಹಾಕಿರುವ (ಲಾಕ್) ಮತ್ತು ಖಾಲಿ ಮನೆಗಳಿಗೆ ಮರುಭೇಟಿ ನೀಡಿ ಯಾವುದೇ ಮನೆಗಳು ಗಣತಿಯಿಂದ ಹೊರತಾಗದಂತೆ ಕ್ರಮವಹಿಸಲಾಗುತ್ತಿದೆ.

ಈ ವಿಶೇಷ ಮರುಪರಿಶೀಲನಾ ಕಾರ್ಯಾಚರಣೆಯಿಂದ ಜನಗಣತಿ ಕಾರ್ಯದ ಒಟ್ಟು ವ್ಯಾಪ್ತಿಯಲ್ಲಿ ಗಣನೀಯ ಪ್ರಮಾಣದ ಸುಧಾರಣೆ ಕಂಡುಬಂದಿದ್ದು, ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯವನ್ನು ಶೇಕಡಾ 100 ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *