ಪ್ರತಿಯೊಂದು ನವರಾತ್ರಿ ದಿನವೂ ದುರ್ಗಾದೇವಿಯ ವಿಭಿನ್ನ ರೂಪಗಳನ್ನು ಆರಾಧಿಸಲಾಗುತ್ತಿದ್ದು, ಈ ಸಂದರ್ಭ “ದುರ್ಗಾ ಸಪ್ತಶತಿ” ಪಠಿಸುವುದು ಅತ್ಯಂತ ಪುಣ್ಯಕಾರ್ಯ ಎನ್ನಲಾಗಿದೆ. ಮಾರ್ಕಂಡೇಯ ಪುರಾಣದ ಭಾಗವಿರುವ ಈ ಗ್ರಂಥದಲ್ಲಿ 700 ಶ್ಲೋಕಗಳೊಂದಿಗೆ ದೇವಿಯ ಮಹಾತ್ಮ್ಯವನ್ನು ವರ್ಣಿಸಲಾಗಿದೆ.
ಪಠಣದ ಮಹತ್ವ ಏನು?
- ದುಷ್ಟ ಶಕ್ತಿಗಳಿಂದ ರಕ್ಷಣೆ, ಆತ್ಮಶಕ್ತಿಯ ಹೆಚ್ಚಳ
- ವೃತ್ತಿ, ವ್ಯವಹಾರ ಮತ್ತು ಕುಟುಂಬ ಜೀವನದಲ್ಲಿ ಸುಧಾರಣೆ
- ಶ್ರದ್ಧೆ ಮತ್ತು ಏಕಾಗ್ರತೆಯಿಂದ ಓದಿದರೆ ಮನಸ್ಸಿಗೆ ಶಾಂತಿ
- ತಾಯಿ ದುರ್ಗೆಯ ಕೃಪೆ ಸಹಜವಾಗಿ ಪ್ರಾಪ್ತಿ
ಪಾರಾಯಣಕ್ಕೆ ಬೇಕಾದ ಸಿದ್ಧತೆ:
- ಪೂಜಾ ಸ್ಥಳವನ್ನು ಶುದ್ಧವಾಗಿ ಇಟ್ಟುಕೊಳ್ಳಿ
- ಸ್ನಾನ ಮಾಡಿ ಹಳದಿ ಅಥವಾ ಕೆಂಪು ಬಣ್ಣದ ಬಟ್ಟೆ ಧರಿಸಿ
- ದೇವಿಯ ಚಿತ್ರ ಅಥವಾ ವಿಗ್ರಹವನ್ನು ಕಲಶದೊಂದಿಗೆ ಪ್ರತಿಷ್ಠಾಪಿಸಿ
- ಹೂವು, ಹಣ್ಣು, ನೈವೇದ್ಯದೊಂದಿಗೆ ದೀಪ–ಧೂಪವನ್ನೇ ಅರ್ಪಿಸಿ
ಪಠಣದ ಕ್ರಮ (ವಿಧಾನ):
- ಸಂಕಲ್ಪ: ಸರಳವಾಗಿ ತಾಯಿ ಪೂಜೆಗೆ ಮನಸ್ಸಿನಲ್ಲಿ ಸಂಕಲ್ಪ ಮಾಡಿ
- ಧ್ಯಾನ: “ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ” ಮಂತ್ರದ ಪಠಣ
- ಪಾಠ: 13 ಅಧ್ಯಾಯಗಳನ್ನು ಕ್ರಮವಾಗಿ ಪಠಿಸಿ
- ಆರತಿ ಮತ್ತು ಹವನ: ಕೊನೆಗೆ ಆರತಿ ನೀಡಿ, ಹವನಕ್ಕೆ ಪೂರ್ಣಾಹುತಿ ಅರ್ಪಿಸಿ
ಪಠಿಸುವಾಗ ಪಾಲಿಸಬೇಕಾದ ನಿಯಮಗಳು:
- ಶುದ್ಧ ಮನಸ್ಸು ಮತ್ತು ಶ್ರದ್ಧೆಯಿಂದ ಮಾತ್ರ ಪಠಣ ಮಾಡಬೇಕು
- ಮಧ್ಯಮ ಸ್ವರದಲ್ಲಿ, ಎದೆತಟ್ಟಿದಂತೆ ಜೋರಾಗಿ ಹೇಳಬಾರದು
- ತಪ್ಪು ಉಚ್ಚಾರಣೆ ತಪ್ಪಿಸಿ, ಸಾಧ್ಯವಾದರೆ ಜ್ಞಾನಿಗಳಿಂದ ಕೇಳಿ
- ಪಠಣದ ಸಮಯದಲ್ಲಿ ಯಾವುದೇ ಅಶುದ್ಧ ನಡವಳಿಕೆ ಅಥವಾ ನಕಾರಾತ್ಮಕತೆ ತಪ್ಪಿಸಿ
- ಪೂರ್ಣ ಪಠಣದ ನಂತರ ಆರತಿ–ಪ್ರಸಾದ ವಿತರಣೆಯಿಂದ ಪೂಜಾ ಕ್ರಮ ಮುಗಿಸಿ
For More Updates Join our WhatsApp Group :




