ರಾಜಕುಮಾರ್ ಸ್ಮಾರಕ ಬಳಿ ಫ್ಲೆಕ್ಸ್ ಗೋಡೌನ್‌ಗೆ ಭೀಕರ ಬೆ*ಕಿ.!

ರಾಜಕುಮಾರ್ ಸ್ಮಾರಕ ಬಳಿ ಫ್ಲೆಕ್ಸ್ ಗೋಡೌನ್‌ಗೆ ಭೀಕರ ಬೆ*ಕಿ.!

ಬ್ಲೂ ಲೀಫ್ ಎಲ್ಇಡಿ ಗೋಡೌನ್ ಸುಟ್ಟು ಭಸ್ಮ; ಪಕ್ಕದ ಪಿಜಿಯಿಂದ 50 ಮಹಿಳೆಯರ ರಕ್ಷಣೆ

ಬೆಂಗಳೂರು: Bengaluru ನಗರದ ನಂದಿನಿ ಲೇಔಟ್‌ನಲ್ಲಿರುವ Rajkumar Memorial ಸಮೀಪದ ಬ್ಲೂ ಲೀಫ್ ಎಲ್ಇಡಿ ಗೋಡೌನ್‌ನಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಬ್ಯಾನರ್ ಹಾಗೂ ಎಲ್ಇಡಿ ಸ್ಕ್ರೀನ್‌ಗಳನ್ನು ಸಂಗ್ರಹಿಸಿ ವಿತರಿಸುತ್ತಿದ್ದ ಗೋಡೌನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆ*ಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ.ಗೋಡೌನ್ ಮುಂಭಾಗ ನಿಲ್ಲಿಸಿದ್ದ ಬುಲೆಟ್ ಬೈಕ್ ಹಾಗೂ ಬೊಲೆರೊ ಪಿಕಪ್ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಅಗ್ನಿ ಪಕ್ಕದ ನಾಲ್ಕು ಅಂತಸ್ತಿನ ಲೇಡಿಸ್ ಪಿಜಿ ಕಟ್ಟಡಕ್ಕೂ ವ್ಯಾಪಿಸಿದ್ದು, ಸುಮಾರು 50 ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗೋಡೆಗಳಲ್ಲಿ ಬಿರುಕು ಹಾಗೂ ಕಿಟಕಿ ಗಾಜುಗಳು ಒಡೆದಿವೆ.

ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *