ಬ್ರೆಸ್ಟ್ ಕ್ಯಾನ್ಸರ್ ವಿರುದ್ಧ ನಟಿ ಹೀನಾ ಖಾನ್​ ಹೋರಾಟ

ಮೂರನೇ ಹಂತದ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಹಿಂದಿ ಕಿರುತೆರೆ ನಟಿ ಹೀನಾ ಖಾನ್ ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳ ಮೂಲಕ ತಮ್ಮ ಹೆಲ್ತ್​​ ಅಪ್ಡೇಟ್ಸ್ ನೀಡುತ್ತಿದ್ದಾರೆ. ಜೊತೆಗೆ, ತಮ್ಮ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಈ ಸವಾಲಿನ ಸಂದರ್ಭ ತಮ್ಮ ದಿನನಿತ್ಯದ ಜೀವನ ಹೇಗಿದೆ ಎಂಬುದರ ಮಾಹಿತಿ ಒದಗಿಸುತ್ತಿದ್ದಾರೆ. ಅದರಂತೆ ಇಂದು ಅಧಿಕೃತ ಸೋಷಿಯಲ್​​ ಮೀಡಿಯಾದಲ್ಲಿ ತಮ್ಮ ಕಿಕ್‌ಬಾಕ್ಸಿಂಗ್ ಸೆಷನ್‌ನ ವಿಡಿಯೋ ಶೇರ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಹೀನಾ, “ಗೆಲ್ಲಲು ಮುನ್ನುಗ್ಗಿ, ಒಂದು ಸಲಕ್ಕೆ ಒಂದು ಹೆಜ್ಜೆ. ನಾನು ನನಗೆ ಅನಿಸಿದ್ದನ್ನು ಮಾಡುತ್ತಿದ್ದೇನೆ. ಹೌದು, ನಾನು ಹೇಳಿದಂತೆ ನೀವು ಒಳ್ಳೆಯ ದಿನಗಳನ್ನು ಕಂಡುಕೊಳ್ಳಬಹುದು. ಒಳ್ಳೆಯ ದಿನಗಳು ಕಡಿಮೆಯಿದ್ದರೆ, ಹೆಚ್ಚು ಮಾಡಿಕೊಳ್ಳಬಹುದು. ಈ ಪ್ರಯಾಣದಲ್ಲಿ ನಾನೇನು ಮಾಡಿದ್ದೇನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಬರೆದುಕೊಂಡಿದ್ದಾರೆ. ನಟಿಯ ಮಾತುಗಳು, ಕಠಿಣ ಪರಿಸ್ಥಿತಿಯ ನಡುವೆಯೂ ಸಕಾರಾತ್ಮಕ ಅನುಭವಗಳ ಮೇಲೆ ಗಮನ ಕೇಂದ್ರೀಕರಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಧೈರ್ಯದ ಮಾತುಗಳನ್ನಾಡಿದ ಹೀನಾ ಆ ದೇವರಿಗೆ ತಮ್ಮ ಕೃತಜ್ಞತೆಯನ್ನೂ ಅರ್ಪಿಸಿದ್ದಾರೆ. “ನನಗೆ ಶಕ್ತಿ ನೀಡಿದ್ದಕ್ಕಾಗಿ ಅಲ್ಲಾನಿಗೆ ಧನ್ಯವಾದಗಳು. ನಿಮ್ಮ ನಿರಂತರ ಬೆಂಬಲ ಮತ್ತು ನನ್ನ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ಹೆಚ್ಚು ಕಡಿಮೆ ಇದೇ ರೀತಿಯ ಹೋರಾಟಗಳನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಗೌರವ, ಪ್ರಾರ್ಥನೆಗಳಿವೆ. ನಿಮ್ಮನ್ನು ನೀವು ಅರಿಯಿರಿ, ನಿಮ್ಮ ಸ್ವಂತ ಮಾರ್ಗ ಕಂಡುಕೊಳ್ಳಿ ಮತ್ತು ನಿಮ್ಮ ದೇಹವನ್ನು ಆಲಿಸಿ” ಎಂದು ಬರೆದುಕೊಂಡಿದ್ದಾರೆ.

https://www.instagram.com/reel/C9o7c1fIWUy/

Leave a Reply

Your email address will not be published. Required fields are marked *