HSR ಲೇಔಟ್‌ನಲ್ಲಿ ನಾಗರಿಕರೊಂದಿಗೆ ಸಂವಾದ: ಘನತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನ ಬಳಕೆಗೆ BBMP ಚಿಂತನೆ.!

HSR ಲೇಔಟ್‌ನಲ್ಲಿ ನಾಗರಿಕರೊಂದಿಗೆ ಸಂವಾದ: ಘನತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನ ಬಳಕೆಗೆ BBMP ಚಿಂತನೆ.!

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಿಂದ HSR ನಿವಾಸಿಗಳ ಸಭೆ; ಸ್ವಚ್ಛತೆಗೆ ಡಿಜಿಟಲ್ ವ್ಯವಸ್ಥೆ

ಬೆಂಗಳೂರು:  ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ರವರು ಇಂದು ಎಚ್‌ಎಸ್‌ಆರ್ ಲೇಔಟ್‌ನ ನಿವಾಸಿಗಳೊಂದಿಗೆ ಮುಖಾಮುಖಿ ಸಂವಾದ ನಡೆಸಿದರು.

ನಾಗರಿಕ ಸಮಸ್ಯೆಗಳ ನೇರ ಪರಿಹಾರಕ್ಕಾಗಿ ಸಾರ್ವಜನಿಕ ಸಂವಾದ: ಎಚ್‌ಎಸ್‌ಆರ್ ಲೇಔಟ್‌ನ ನಿವಾಸಿ ಕಲ್ಯಾಣ ಸಂಘಗಳು ಮತ್ತು ನಾಗರಿಕ ಪ್ರತಿನಿಧಿಗಳೊಂದಿಗೆ ನಡೆಸಿದ ಈ ಸಭೆಯಲ್ಲಿ, ಘನ ತ್ಯಾಜ್ಯ ನಿರ್ವಹಣೆ (SWM), ಮರಗಳ ಕಟಾವು ಮತ್ತು ತೋಟಗಾರಿಕೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚಿಸಲಾಯಿತು.

ಪಾಲಿಕೆಯ ಸೇವಾ ವಿತರಣೆಯನ್ನು ಹತೋಟಿಗೆ ತರಲು ಸಾರ್ವಜನಿಕರ ಸಲಹೆಗಳನ್ನು ಆಯುಕ್ತರು ಆಲಿಸಿದರು.

*ನಾಗರಿಕರು ನೀಡಿದ ಸಮಸ್ಯೆಗಳು ಹಾಗೂ ಸಲಹೆಗಳು

* ಪ್ರಸ್ತುತ ಇರುವ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯನ್ನು ಬಲಪಡಿಸಲು ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸುವ ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸುವುದು ಅವಶ್ಯವಿರುತ್ತದೆ.

* ತ್ಯಾಜ್ಯ ವಿಂಗಡಣೆಯನ್ನು ವೈಜ್ಞಾನಿಕವಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

* ಕಟ್ಟಡ ನಿರ್ಮಾಣ ಮತ್ತು ಧ್ವಂಸ ಅವಶೇಷಗಳನ್ನು (C&D Waste) ರಸ್ತೆ ಬದಿಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು.

*ಅನಧಿಕೃತ ವಿಲೇವಾರಿಯನ್ನು ತಡೆಗಟ್ಟಲು ಅಧಿಕಾರಿಗಳ ನಡುವೆ ಉತ್ತಮ ಸಮನ್ವಯ ಮತ್ತು ನಿಗದಿತ ವಿಲೇವಾರಿ ಕೇಂದ್ರಗಳ ಬಳಕೆಗೆ ಒತ್ತು ನೀಡುವುದು.

*ಭವಿಷ್ಯದ ಯೋಜನೆಗಳಲ್ಲಿ ನಾಗರಿಕರ ಸಲಹೆಗಳಿಗೆ ಸ್ಥಾನ

ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಅಭಿಪ್ರಾಯಗಳನ್ನು ಪರಿಶೀಲಿಸಿ ಮುಂದಿನ ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗುವುದು  ಹಾಗೂ ಸುಸ್ಥಿರ ಮತ್ತು ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ತಿಳಿಸಿದರು.

ಈ ಸಭೆಯಲ್ಲಿ ಜಂಟಿ ಆಯುಕ್ತರಾದ ಶ್ರೀ ಸತೀಶ್ ಬಾಬು, ಡಿಜಿಎಂ ಕೃಷ್ಣೇಗೌಡ, ಎಚ್‌ಎಸ್‌ಆರ್ ಸಿಟಿಜನ್ ಫೋರಂನ ಡಾ. ಶಾಂತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *