ಸಂಗೊಳ್ಳಿ ರಾಯಣ್ಣನಿಗೆ ಸಿದ್ದರಾಮಯ್ಯ ಹೋಲಿಕೆನಾ..? – ಎನ್ ರವಿಕುಮಾರ್ 

ಸಂಗೊಳ್ಳಿ ರಾಯಣ್ಣನಿಗೆ ಸಿದ್ದರಾಮಯ್ಯ ಹೋಲಿಕೆನಾ..? - ಎನ್ ರವಿಕುಮಾರ್ 

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತಾಡಿದ್ದಾರೆ. ರಾಯಣ್ಣನ್ನ ನಮ್ಮದೇ ಬಾಂದವರು ಹಿಡಿದುಕೊಟ್ರು ಅಂತ ಹೇಳಿದ್ದಾರೆ. ಹಾಗೆಯೇ ನನಗೂ ದ್ರೋಹ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೇಳ್ತೀನಿ.? ಯಾರು ನಿಮಗೆ ದ್ರೋಹ ಮಾಡ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್  ಪ್ರಶ್ನೆ ಮಾಡಿದ್ದಾರೆ.

ರಾಯಣ್ಣ ಹಿಡಿದುಕೊಟ್ಟಿದ್ದು ಅತ್ಯಂತ ದೇಶ ದ್ರೋಹ. ನಿಮನ್ನ ಯಾರು ಹಿಡಿದುಕೊಡ್ತಿದ್ದಾರೆ, ಹೆಸರು ಬಹಿರಂಗಗೊಳಿಸಿ.? ಆಗ ಬ್ರಿಟಿಷ್ ಸರ್ಕಾರ ಇತ್ತು, ಅವರ ಬಳಿ ಏನೋ ಪಡೆದು ಹಿಡಿದುಕೊಟ್ಟಿರಬಹುದು. ಆದ್ರೆ ಈಗ ನಿಮ್ಮನ್ನ ಯಾರು ಹಿಡಿದುಕೊಡ್ತಿದ್ದಾರೆ.? ಎಂದು ಕೇಳಿದ್ದಾರೆ.

ಸಂಗೊಳ್ಳಿ ರಾಯಣ್ಣಗೂ, ಸಿದ್ದರಾಮಯ್ಯಗೂ ಎತ್ತಣದಿಂದ ಎತ್ತಣ ಸಂಬಂಧ.? ರಾಯಣ್ಣ ಅಪ್ರತಿಮ ಸೈನಿಕ. ರಾಯಣ್ಣ ಏನು ನಿಮ್ಮ ಹಾಗೆ 14 ಸೈಟು ಪಡೆದಿರಲಿಲ್ಲ. ರಾಯಣ್ಣ 3.14 ಎಕರೆ ಜಮೀನು ಪಡೆದಿರಲಿಲ್ಲ. ದೇಶಕ್ಕೆ ಕೀರ್ತಿ ತಂದವರು ರಾಯಣ್ಣ. ನೀವು ಯಾವ ರಾಜ್ಯಕ್ಕೆ ಕೀರ್ತಿ ತಂದಿದ್ದೀರಿ.? ಎಂದು ಕೇಳಿದ್ದಾರೆ.

ನಾಗಮಂಗಲ ಗಲಬೆ ವಿಚಾರ

ಹಿಂದೂ ವಿರೋಧಿ ಇದ್ರೆ ಅದು ಸಿದ್ದರಾಮಯ್ಯ. ಗಣೇಶ ಕೂರಿಸಿದವರಿಗೆ ದ್ರೋಹ ಬಗೆದವರು ಸಿದ್ದರಾಮಯ್ಯ. ಅಶ್ವಥ್ ನಾರಾಯಣ್ ನೇತೃತ್ವದ ಸತ್ಯಶೋಧನಾ ಸಮಿತಿ ಭೇಟಿ ನಿಡೀತ್ತು. ಅದೇ ರೀತಿ PFI ಬೆಂಬಲಿತ, ದೇಶ ದ್ರೋಹಿ ಸಂಘಟನೆ ಬೆಂಬಲಿಸೋ SDPI ಕೂಡ ವರದಿಗೆ ಬಂದಿದೆ. SDPI ಅಧ್ಯಕ್ಷ ಅಬ್ದುಲ್ ಮಜೀದ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ವರದಿ ಮಾಡಲು ಹೋಗಿದೆ. ಅವರ ವರದಿ ನಮಗೆ ಈಗಾಗಲೇ ಗೊತ್ತಾಗಿದೆ ಎಂದಿದ್ದಾರೆ.

ಹಿಂದೂಗಳು ಅನ್ಯಾಯ ಮಾಡಿದ್ರು. ಅವರೇ ಪ್ರೊಸೇಷನ್ ವೇಳೆ ಕಲ್ಲು ಹೊಡೆದ್ರು ಅಂತ ವರದಿ ನೀಡ್ತಾರೆ. ಸಿದ್ದರಾಮಯ್ಯ ಅವರೇ ನಿಮ್ಮ ಆಡಳಿತದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗ್ತಾರೆ, ಪ್ಯಾಲೆಸ್ತೈನ್ ಧ್ವಜ ಹಿಡೀತಾರೆ. ರಾಮೇಶ್ವರ ಕೆಫೆ ಮೇಲೆ ಬಾಂಬ್ ಹಾಕಿದ್ದಾರೆ, ಕುಕ್ಕರ್ ಬ್ಲಾಸ್ಟ್ ಮಾಡ್ತಾರೆ. ಕರ್ನಾಟಕ ಸೇಫ್ ಅಂತ ಅವರಿಗೆ ಅನಿಸಿದೆ. ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ ಎಂದು ಆಕ್ರೋಶ ಹೊರಗೆ ಹಾಕಿದ್ದಾರೆ.

ಪರಮೇಶ್ವರ್ ಅವರ ಬಿಜೆಪಿಯವರು ಡಿಸೈನ್ ಹೇಳಿಕೆಗೆ ಟಾಂಗ್ ನೀಡಿದ  ರವಿಕುಮಾರ್. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ರು. ಆದ್ರೂ ಕೂಗಿಯೇ ಇಲ್ಲ ಅಂತ ಹೇಳಿಕೆ ನೀಡಿದ್ರು. ಇದಕ್ಕಿಂತ ಸಾಕ್ಷಿ ಬೇಕಾ.? ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *