ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ವಿವಾದ ತಾರಕಕ್ಕೆ.!

ಹುಬ್ಬಳ್ಳಿ-ಧಾರವಾಡ ಪಾಲಿಕೆ ವಿಭಜನೆ ವಿವಾದ ತಾರಕಕ್ಕೆ.!

ಬಿಜೆಪಿ vs ಕಾಂಗ್ರೆಸ್ಬೃಹತ್ ಪಾಲಿಕೆ ಅಥವಾ ವಿಭಜನೆ?

ಹುಬ್ಬಳ್ಳಿ: ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಭವಿಷ್ಯದ ಬಗ್ಗೆ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಬಿಜೆಪಿ ಬೃಹತ್ ಮಹಾನಗರ ಪಾಲಿಕೆ ರಚನೆಗೆ ಒತ್ತಾಯಿಸುತ್ತಿದ್ದರೆ, ಕಾಂಗ್ರೆಸ್ ವಿಭಜನೆಯ ನಿರ್ಧಾರಕ್ಕೆ ಪಟ್ಟು ಹಿಡಿದಿದೆ.1962ರಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ನಗರಸಭೆಗಳು ವಿಲೀನಗೊಂಡು ಮಹಾನಗರ ಪಾಲಿಕೆ ರಚನೆಯಾಯಿತು. ಅನುದಾನ ಹಂಚಿಕೆಯಲ್ಲಿ ಅಸಮಾನತೆ ಆರೋಪದ ಹಿನ್ನೆಲೆ ವಿಭಜನೆ ಬೇಡಿಕೆ ಬಲಗೊಂಡಿತ್ತು.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪಾಲಿಕೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆಯಿಂದ ಬಿಜೆಪಿ ‘ಬೃಹತ್ ಪಾಲಿಕೆ’ ಪರ ನಿಲುವು ತಳೆದಿದೆ. ಕೇಂದ್ರ ಅನುದಾನದ ಭರವಸೆ ಇಲ್ಲ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದ್ದು, ಧಾರವಾಡಕ್ಕೆ ನ್ಯಾಯ ಸಿಗಲು ವಿಭಜನೆಯೇ ಉತ್ತಮ ಎಂದಿದೆ ಎರಡು ಪಕ್ಷಗಳ ಭಿನ್ನಾಭಿಪ್ರಾಯಗಳ ನಡುವೆ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *