ಕೆಂಪೇಗೌಡ ಲೇಔಟ್ ಸೈಟ್ ಮಾಲೀಕರಿಗೆ ಕೆ-ರೇರಾ  ಆದೇಶ.

ಕೆಂಪೇಗೌಡ ಲೇಔಟ್ ಸೈಟ್ ಮಾಲೀಕರಿಗೆ ಕೆ-ರೇರಾ  ಆದೇಶ.

ಮೂಲಸೌಕರ್ಯ ವಿಳಂಬಕ್ಕೆ ಬಡ್ಡಿ ಸಹಿತ ಪರಿಹಾರ ನೀಡಲು ಬಿಡಿಎಗೆ ಕಟ್ಟುನಿಟ್ಟಿನ ನಿರ್ದೇಶನ.!

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇಔಟ್‌ನ ಸೈಟ್ ಮಾಲೀಕರಿಗೆ ಸಂಬಂಧಿಸಿದ ದೀರ್ಘಕಾಲದ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದ್ದು, ಮೂಲಸೌಕರ್ಯ ಒದಗಿಸುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಬಡ್ಡಿ ಸಮೇತ ಪರಿಹಾರ ನೀಡುವಂತೆ ಕೆ-ರೇರಾ (K-RERA) ಬಿಡಿಎಗೆ ಆದೇಶಿಸಿದೆ.ಕೇವಲ ಹಳೆಯ ಬಾಕಿ ಮಾತ್ರವಲ್ಲದೆ, 03-02-2026 ರಿಂದ ಲೇಔಟ್‌ನಲ್ಲಿ ಮೂಲಭೂತ ಸೌಕರ್ಯಗಳು ಸಂಪೂರ್ಣಗೊಳ್ಳುವವರೆಗೆ ಬಿಡಿಎ ನಿರಂತರವಾಗಿ ಬಡ್ಡಿ ನೀಡುತ್ತಿರಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈವರೆಗೆ ದಾಖಲೆ ಸಲ್ಲಿಸದ ಮಾಲೀಕರು ರೇರಾ ಕಾಯ್ದೆಯಡಿ ದೂರು ದಾಖಲಿಸಿ, ಸಮಾನ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ವಿಳಂಬಕ್ಕೆ ಡೆವಲಪರ್ ನೇರ ಹೊಣೆ ಎಂದು ಆದೇಶದಲ್ಲಿ ಹೇಳಲಾಗಿದೆ.

ವರ್ಷಗಳಿಂದ ಸೈಟ್ ಸಿಕ್ಕರೂ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದ ಮಾಲೀಕರಿಗೆ ಈ ಆದೇಶವು ಆರ್ಥಿಕ ಭರವಸೆ ನೀಡಿದೆ. ಸರ್ಕಾರಿ ಸಂಸ್ಥೆಯಾದರೂ ಸಹ ರೇರಾ ನಿಯಮಗಳ ಅಡಿಯಲ್ಲಿ ಪರಿಹಾರ ನೀಡಲೇಬೇಕು ಎಂಬುದು ಈ ಆದೇಶದ ಪ್ರಮುಖ ವಿಚಾರವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *