ಎಸ್ಸಿಒ ಸಮಿಟ್‌ನಲ್ಲಿ ಮೋದಿ-ಪುಟಿನ್ ಸ್ನೇಹದ ಸ್ಫೋಟ! ಪಾಕ್ ಪ್ರಧಾನಿ ಷರೀಫ್ “ಪ್ರೇಕ್ಷಕನಾಗಿ” ನಿಂತಿರುವ ಫೋಟೋ ವೈರಲ್

ಎಸ್ಸಿಒ ಸಮಿಟ್‌ನಲ್ಲಿ ಮೋದಿ-ಪುಟಿನ್ ಸ್ನೇಹದ ಸ್ಫೋಟ! ಪಾಕ್ ಪ್ರಧಾನಿ ಷರೀಫ್ “ಪ್ರೇಕ್ಷಕನಾಗಿ” ನಿಂತಿರುವ ಫೋಟೋ ವೈರಲ್

ಚೀನಾ: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಎಸ್ಸಿಒ (SCO) ಶೃಂಗಸಭೆ ಈ ಬಾರಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಭಾರತ, ರಷ್ಯಾ, ಚೀನಾ ಈ ತ್ರಿಶಕ್ತಿಗಳು ರಾಜಕೀಯ ವೇದಿಕೆಯಲ್ಲಿ ಮುಖಾಮುಖಿಯಾಗಿರುವುದು ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಬಾಂಧವ್ಯವೇ ಹೆಚ್ಚು ಗಮನ ಸೆಳೆಯುತ್ತಿದೆ.

ಮೊದಲಿನಿಂದಲೂ SCO ವೇದಿಕೆಯಲ್ಲಿ “ಸೈಡ್ ಲೈನ್” ದೃಶ್ಯಗಳು ಜನರನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಈ ಬಾರಿ ಒಂದು ವಿಶಿಷ್ಟ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ

ಮೋದಿ ಮತ್ತು ಪುಟಿನ್ ಪರಸ್ಪರ ಭಾವಪೂರ್ಣವಾಗಿ ಮಾತನಾಡುತ್ತಿರುವಾಗ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹಿಂದಿನಿಂದ ತಬ್ಬೇಳಿಯಾಗಿ ನೋಡುತ್ತಿರುವ ದೃಶ್ಯಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ಇದನ್ನು ಹಲವರು “ಜಿಯೋಪಾಲಿಟಿಕ್ಸ್‌ನಲ್ಲಿ ಯಥಾರ್ಥ ಚಿತ್ರಣ” ಎಂದಿದ್ದಾರೆ. ಇನ್ನೊಬ್ಬರು “ಸ್ನೇಹಿತರು ಮಾತನಾಡುತ್ತಿರುವಾಗ ಜವಾಬ್ದಾರಿಗಳಿಲ್ಲದ ನೈಜ ಸ್ಥಿತಿಗೆ ಶಹಬಾಜ್‌ರು ಉದಾಹರಣೆ” ಎಂದು ಟೀಕಿಸಿದ್ದಾರೆ.

ಮೋದಿ–ಪುಟಿನ್: ಒಟ್ಟಿಗೆ ಕಾರ್‌ನಲ್ಲಿ, ದ್ವಿಪಕ್ಷೀಯ ಮಾತುಕತೆಗೂ ಸಜ್ಜುಸಮಿತಿಯ ಜೊತೆಗೆ ಮೋದಿ ಮತ್ತು ಪುಟಿನ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಸಭೆ ಮುಗಿದ ಬಳಿಕ ಇಬ್ಬರೂ ಒಂದೇ ಕಾರಿನಲ್ಲಿ ತೆರಳಿದ ದೃಶ್ಯವೂ ಪಟಪಟನೆ ವೈರಲ್ ಆಗುತ್ತಿದೆ.ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪುಟಿನ್ ಅವರೊಂದಿಗೆ ಹಂಚಿಕೊಂಡ ಕ್ಷಣದ ಫೋಟೋವನ್ನು ಪೋಸ್ಟ್ ಮಾಡಿ:

“ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವುದು ಯಾವಾಗಲೂ ಖುಷಿಯ ವಿಷಯ. ಭಾರತ–ರಷ್ಯ ಸಂಬಂಧಗಳು ಇನ್ನಷ್ಟು ಬಲಗೊಳ್ಳುತ್ತವೆ.” ಎಂದು ಹೇಳಿದ್ದಾರೆ.

ಭಯೋತ್ಪಾದನೆ ಖಂಡಿಸಿದ ಮೋದಿ: ಪಹಲ್ಗಾಂ ಉಗ್ರದಾಳಿ ಉಲ್ಲೇಖ

ಎಸ್ಸಿಒ ವೇದಿಕೆಯಲ್ಲಿ ಮೋದಿ ಅವರ ಭಾಷಣ ಗಂಭೀರ ಬರಹದಂತೆ ಉಳಿಯಿತು. ಅವರು ಭಯೋತ್ಪಾದನೆ ವಿರುದ್ಧ ಖಂಡನೆ ವ್ಯಕ್ತಪಡಿಸಿ, ಪಹಲ್ಗಾಂ ದಾಳಿಯ ಉದಾಹರಣೆ ನೀಡಿ, “ಭಯೋತ್ಪಾದನೆ ವಿಷಯದಲ್ಲಿ ಕೆಲವು ರಾಷ್ಟ್ರಗಳು ದ್ವಂದ್ವ ನಿಲುವು ತಾಳುತ್ತಿವೆ. ಇದು ಖಂಡನೀಯ.” ಎಂದು ಹೇಳಿದ್ದಾರೆ.ಈ ಹೇಳಿಕೆಗೆ ಸಹಕಾರಿ ತೋರಿಸಿರುವ ಎಸ್ಸಿಒ ಸದಸ್ಯ ರಾಷ್ಟ್ರಗಳು, ಟಿಯಾಂಜಿನ್ ಘೋಷಣೆಯಲ್ಲಿ ಪಹಲ್ಗಾಂ ದಾಳಿಯನ್ನು ಖಂಡಿಸಿ, ತೀವ್ರವಾಗಿ ಭಯೋತ್ಪಾದಕರಿಗೆ ಬೆಂಬಲ ನೀಡುವವರ ವಿರುದ್ಧ ಕ್ರಮಕ್ಕೆ ಒತ್ತಾಯ.

ರಾಜಕೀಯ ಬದಲಾವಣೆಗಳ ನಡುವೆ ಭಾರತದ ಗಂಭೀರ ಜಿಯೋಪಾಲಿಟಿಕಲ್ ಪಾವರ್ ಪ್ಲೇ ಚೀನಾದಿಂದ ಅಮೆರಿಕದ ಟ್ಯಾರಿಫ್ ನೀತಿಯ ವಿರುದ್ಧ, ಭಾರತವು ತನ್ನ ಉತ್ಕೃಷ್ಟ ಸಂಬಂಧಗಳನ್ನು ಬಲಪಡಿಸಿಕೊಳ್ಳಲು, ರಷ್ಯಾ ಮತ್ತು ಚೀನಾ ಜೊತೆ ಸಂವಾದ ಮುಂದುವರಿಸುತ್ತಿದೆ. ಈ ಶೃಂಗಸಭೆಯು ಭಾರತಕ್ಕೆ ಜಾಗತಿಕ ವೇದಿಕೆಯಲ್ಲಿ ತೊಡಗಿಸಿಕೊಳ್ಳುವ ಮಹತ್ವದ ಸಂದರ್ಭವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *