‘ನಮ್ಮ ವಾರ್ಡ್ ನಮ್ಮ ಹೆಮ್ಮೆ’: 30 ವರ್ಷದ ದೃಷ್ಟಿಕೋನದೊಂದಿಗೆ ಕೆಲಸ ಮಾಡಿ ಎಂದ ಆಯುಕ್ತ ರಾಜೇಂದ್ರK.V

 ‘ನಮ್ಮ ವಾರ್ಡ್ ನಮ್ಮ ಹೆಮ್ಮೆ’: 30 ವರ್ಷದ ದೃಷ್ಟಿಕೋನದೊಂದಿಗೆ ಕೆಲಸ ಮಾಡಿ ಎಂದ ಆಯುಕ್ತ ರಾಜೇಂದ್ರK.V

ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ ‘ಬಜೆಟ್-ಟು-ಆ್ಯಕ್ಷನ್’ ಕಾರ್ಯಾಗಾರ: ನಗರಾಭಿವೃದ್ಧಿಗೆ ದೀರ್ಘಕಾಲಿಕ ಯೋಜನೆಗೆ ಒತ್ತು

ಬೆಂಗಳೂರು:  ಪಶ್ಚಿಮ ನಗರ ಪಾಲಿಕೆಯ 2026-27ನೇ ಸಾಲಿನ 4,732 ಕೋಟಿ ರೂ. ಬಜೆಟ್ ಅನ್ನು ಸಮರ್ಪಕವಾಗಿ ಬಳಕೆ ಮಾಡುವ ಉದ್ದೇಶದಿಂದ ಆಯೋಜಿಸಲಾದ ‘ಬಜೆಟ್-ಟು-ಆ್ಯಕ್ಷನ್’ ಕಾರ್ಯಾಗಾರದಲ್ಲಿ ಪಾಲಿಕೆ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು. “ನಮ್ಮ ವಾರ್ಡ್ ನಮ್ಮ ಹೆಮ್ಮೆ” ಎಂಬ ಭಾವನೆಯೊಂದಿಗೆ ಮುಂದಿನ 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ನಗರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಅಭಿಯಂತರರಿಗೆ ಕರೆ ನೀಡಿದರು.

ನಗರದ ರಸ್ತೆ, ಫುಟ್‌ಪಾತ್, ಪಾರ್ಕ್, ಕೆರೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಕೇವಲ ನಿರ್ವಹಣೆಗಷ್ಟೇ ಸೀಮಿತಗೊಳಿಸದೆ, ಅವುಗಳ ಬಾಳಿಕೆ ಮತ್ತು ಉಪಯೋಗಿತ್ವ ಹೆಚ್ಚಿಸುವತ್ತ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಪ್ರೈವೇಟ್-ಪಬ್ಲಿಕ್ ಪಾರ್ಟ್ನರ್‌ಶಿಪ್ (PPP) ಮಾದರಿಯಲ್ಲಿ ನಗರ ಸೌಂದರ್ಯೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಕಾರ್ಯಾಗಾರದಲ್ಲಿ ಫುಟ್‌ಪಾತ್ ಅಭಿವೃದ್ಧಿ, ರಸ್ತೆ ಆಡಿಟ್, ಅನಧಿಕೃತ ಆಪ್ಟಿಕ್ ಫೈಬರ್ ಕೇಬಲ್ ಸಮಸ್ಯೆ, ಪಾರಂಪರಿಕ ಸ್ಥಳಗಳ ಸಂರಕ್ಷಣೆ, ಮಿಯಾವಾಕಿ ಅರಣ್ಯ, ಸಾಕುಪ್ರಾಣಿ ಸ್ನೇಹಿ ಪಾರ್ಕ್ ಹಾಗೂ ಅಂಗವಿಕಲ ಸ್ನೇಹಿ ಪಾರ್ಕ್ ಸ್ಥಾಪನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.

ಡಬ್ಲ್ಯೂಆರ್‌ಐ ಇಂಡಿಯಾ, ವಾಕಲೂರು, ಅರ್ಬನ್ ಡಿಸೈನ್ ಸೆಲ್ ಸೇರಿದಂತೆ ಹಲವು ಎನ್‌ಜಿಒಗಳು ಮತ್ತು ತಜ್ಞ ಸಂಸ್ಥೆಗಳು ನಗರ ಯೋಜನೆಗೆ ಸಂಬಂಧಿಸಿದ ಸಲಹೆಗಳನ್ನು ಹಂಚಿಕೊಂಡವು. ನಗರ ಸಮಸ್ಯೆಗಳನ್ನು ಗುರುತಿಸಿ ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.ನಗರಾಭಿವೃದ್ಧಿಗೆ ದೀರ್ಘಕಾಲಿಕ ದೃಷ್ಟಿಕೋನ ಮತ್ತು ವೈಜ್ಞಾನಿಕ ಯೋಜನೆ ಅಗತ್ಯ ಎಂದು ಕಾರ್ಯಾಗಾರದಲ್ಲಿ ಒತ್ತಿ ಹೇಳಲಾಯಿತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *