ಬೆಂಗಳೂರಿನಲ್ಲಿ ಹೆಚ್ಚಿದ ತಾಪಮಾನದಿಂದ ಮಣ್ಣಿನ ಮಡಿಕೆಗಳಿಗೆ ಭಾರೀ ಬೇಡಿಕೆ
ಬೆಂಗಳೂರು : ಬೆಂಗಳೂರಿನಲ್ಲಿ ಬೇಸಿಗೆ ತೀವ್ರವಾಗುತ್ತಿದ್ದಂತೆ ಮಣ್ಣಿನ ಮಡಕೆಗಳ ಬಳಕೆ ಮತ್ತೆ ಟ್ರೆಂಡ್ ಆಗುತ್ತಿದೆ. ತಂಪಾದ ಮತ್ತು ಸಹಜ ನೀರನ್ನು ಪಡೆಯಲು ಜನರು ಫ್ರಿಜ್ ಬದಲಾಗಿ ಮಡಕೆಯತ್ತ ಮುಖ ಮಾಡುತ್ತಿದ್ದಾರೆ. ಮಡಕೆಯ ನೀರು ಆರೋಗ್ಯಕರ ಎಂದು ನಂಬಿಕೆ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಮಡಕೆ, ಅಡುಗೆ ಪಾತ್ರೆಗಳು, ಕಪ್ ಮತ್ತು ಗ್ಲಾಸ್‌ಗಳಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಉತ್ಪಾದನೆಗಿಂತ ಮಾರಾಟವೇ ಹೆಚ್ಚು ನಡೆಯುತ್ತಿದ್ದು, ವ್ಯಾಪಾರಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮದಿಂದ ಗ್ಯಾಸ್ ಕೊರತೆ ಉಂಟಾಗಿ ಮಡಕೆ ತಯಾರಕರಿಗೆ ಸಂಕಷ್ಟ ಎದುರಾಗಿದೆ.
ಗ್ಯಾಸ್ ಮತ್ತು ಕಟ್ಟಿಗೆಯಿಂದ ಮಡಕೆ ಸುಡುವ ಪ್ರಕ್ರಿಯೆ ಕಷ್ಟಕರವಾಗಿದೆ. ಕಳೆದ ವರ್ಷದ ಹೋಲಿಕೆಯಲ್ಲಿ ಮಡಕೆಗಳ ದರ ₹20ರಿಂದ ₹50ರವರೆಗೆ ಏರಿಕೆಯಾಗಿದೆ. 20 ಲೀಟರ್ ಮಡಕೆ ₹500 ಹಾಗೂ 25 ಲೀಟರ್ ಮಡಕೆ ₹750ಕ್ಕೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಾದರೂ ಖರೀದಿ ಉತ್ಸಾಹದಲ್ಲಿ ಯಾವುದೇ ಕುಸಿತ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಬಿಸಿಲು ಹೆಚ್ಚಿದಂತೆ ಮಡಕೆಗಳಿಗೆ ಇನ್ನಷ್ಟು ಬೇಡಿಕೆ ಏರಿಕೆಯಾಗುವ ಸಾಧ್ಯತೆ ಇದೆ.
For More Updates Join our WhatsApp Group :




