ಬೆಂಗಳೂರಿಗೆ ಬೆಲೆ ಏರಿಕೆ ಶಾಕ್, ಹೊಟೆಲ್‌ಗಳಲ್ಲಿ ಕಾಫಿ ತಿಂಡಿಗಳ ಬೆಲೆ ಹೆಚ್ಚಳ.!

ಬೆಂಗಳೂರಿಗೆ ಬೆಲೆ ಏರಿಕೆ ಶಾಕ್, ಹೊಟೆಲ್‌ಗಳಲ್ಲಿ ಕಾಫಿ ತಿಂಡಿಗಳ ಬೆಲೆ ಹೆಚ್ಚಳ.!

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಹೊಸ ದರ ಜಾರಿ.!

ಬೆಂಗಳೂರು: ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ದೇಶದಲ್ಲಿ ಹೊಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಈಗಾಗಲೇ ಹೊಸ ದರ ಜಾರಿಗೆ ಬಂದಿದೆ. ಬೆಂಗಳೂರಿನ ಹಲವು ಹೊಟೆಲ್‌ಗಳಲ್ಲಿ ಟೀ, ಕಾಫಿ, ತಿಂಡಿಗಳ ಬೆಲೆ ಏರಿಕೆಯಾಗಿದೆ. ದಿನ ಬಳಕೆ ವಸ್ತುಗಳು, ಹೊಟೆಲ್ ತಿನಿಸುಗಳು ಇದೀಗ ದುಬಾರಿಯಾಗಿರುವುದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಟೀ ಹಾಗೂ ಕಾಫಿ ಬೆಲೆ 25 ರೂಪಾಯಿಗೆ ಏರಿಕೆಯಾಗಿದೆ.

ಬೆಂಗಳೂರಿನ ಕೆಲ ಹೋಟೆಲ್ ಗಳಲ್ಲಿ ಹೊಸ ದರ

ಮೊದಲು ಎಲ್‌ಪಿಜಿ ಸಿಲಿಂಡರ್ ಕೊರತೆ ಕಾರಣ ಬೆಲೆ ಏರಿಕೆ ಮಾಡಿದ್ದ ಹೊಟೆಲ್‌ಗಳು ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ತಿನಿಸುಗಳ ಬೆಲೆ ಏರಿಕೆ ಮಾಡಿದೆ. ಟೀ ಹಾಗೂ ಕಾಫಿ ದರದಲ್ಲಿ 5 ರೂಪಾಯಿ ಏರಿಕೆ ಮಾಡಲಾಗಿದೆ. ತಿಂಡಿಯ ದರದಲ್ಲೂ 5 ರೂಪಾಯಿ ಏರಿಕೆ ಮಾಡಲಾಗಿದೆ. ಬೆಂಗಳೂರಿನ ಅಶೋಕ‌ ಪಿಲ್ಲರ್ ಬಳಿಯ ಶಿವಳ್ಳಿ ಹೋಟೆಲ್ ನಲ್ಲಿ ಪರಿಷ್ಕೃತ ದರ ಜಾರಿಗೆ ಬಂದಿದೆ. ಬೆಂಗಳೂರಿನ ಹಲವು ಹೊಟೆಲ್‌ಗಳಲ್ಲಿ ಹೊಸ ದರ ಪಟ್ಟಿ ಜಾರಿಗೆ ಬಂದಿದೆ.

ಪಿಜಿಗಳಲ್ಲೂ ಬೆಲೆ ಏರಿಕೆ ಬಿಸಿ

ಹೋಟೆಲ್ ತಿಂಡಿ ಕಾಪೀ ದರ ಏರಿಕೆ ಬೆನ್ನಲ್ಲೇ ಇದೀಗ PGಗಳಲ್ಲಿ ಬೆಲೆ ಏರಿಕೆಯಾಗುತ್ತಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಿಂದ ಬೆಂಗಳೂರಿನಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ)ಗಳಲ್ಲಿ ಬೆಲೆ ಏರಿಕೆಯಾಗುತ್ತಿದೆ. ಪಿಜಿಗಳ ದರದಲ್ಲಿ ಶೇಕಡಾ 5 ರಿಂದ 10ರಷ್ಟು ಬೆಲೆ ಏರಿಕೆಯಾಗುತ್ತಿದೆ. ಇದೇ ತಿಂಗಳಲ್ಲಿ ಪಿಜಿ ಬೆಲೆ ಏರಿಕೆ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ. ಈ ಕುರಿತು ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *