ಬೆಳಗಾವಿಯಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಕಲ್ಲುತೂರಾಟ.!

ಬೆಳಗಾವಿಯಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಕಲ್ಲುತೂರಾಟ.!

ST ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಕುರುಬ ಕುಟುಂಬ ಒಂಟಿ; ಮಾತನಾಡಿದರೆ ₹5,000 ದಂಡ ಎಚ್ಚರಿಕೆ

ಬೆಳಗಾವಿ: ಆಧುನಿಕ ಯುಗದಲ್ಲೂ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಜೀವಂತವಾಗಿರುವ ಘಟನೆ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪ್ರೇಮ ಸಂಬಂಧದ ವಿಚಾರಕ್ಕೆ ಕುರುಬ ಸಮಾಜದವರೇ ತಮ್ಮದೇ ಸಮುದಾಯದ ಕುಟುಂಬವನ್ನು ಬಹಿಷ್ಕರಿಸಿರುವುದು ಆತಂಕ ಮೂಡಿಸಿದೆ.
ಸಾಂಬ್ರೆಕರ್ ಕುಟುಂಬದ ಯುವತಿಯೊಬ್ಬಳು ಎಸ್ಟಿ ಸಮುದಾಯದ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಸಮಾಜದ ಮುಖಂಡರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮದುವೆ, ಹಬ್ಬ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನವಿಲ್ಲದೆ ಕುಟುಂಬ ಒಂಟಿಯಾಗಿದ್ದು, ಸ್ವಜಾತಿಯವರೇ ದೂರವಿರುವುದು ನೋವು ತಂದಿದೆ. “ಗೌರವದಿಂದ ಬದುಕಲು ಅವಕಾಶ ಕೊಡಿ” ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.ಇತ್ತೀಚೆಗೆ ದುಷ್ಕರ್ಮಿಗಳು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಕೂಡ ನಡೆದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.ಹಿರೇಬಾಗೇವಾಡಿ ಠಾಣೆಗೆ ದೂರು ನೀಡಿದರೂ 15 ದಿನಗಳಿಂದ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ರಕ್ಷಣೆಗೆ ಆಗ್ರಹ ಹೆಚ್ಚಾಗಿದೆ.ಸಾಮಾಜಿಕ ಬಹಿಷ್ಕಾರ ಮತ್ತು ಜಾತಿ ಆಧಾರಿತ ಒತ್ತಡಗಳು ಇನ್ನೂ ಮುಂದುವರಿಯುತ್ತಿರುವುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

For More Updates Join our WhatsApp Group :  

https://chat.whatsapp.com/JVoHqE476Wn3pVh1gWNAcH

                                  

Leave a Reply

Your email address will not be published. Required fields are marked *