ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ದೋಸೆ ಬ್ರೇಕ್‌ಫಾಸ್ಟ್: ಮೈಲಾರಿ ಹೋಟೆಲ್‌ಗೆ ರಾಜಕೀಯ ಭೇಟಿ
ಮೈಸೂರು: ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿನ ಪ್ರಸಿದ್ಧ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ದೋಸೆ ಹಾಗೂ ಇಡ್ಲಿ ಸವಿದರು. ಈ ವೇಳೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಸ್ಥಳೀಯ ನಾಯಕರು ಅವರೊಂದಿಗೆ ಇದ್ದರು. ಹೋಟೆಲ್‌ನಲ್ಲಿ ಆಹಾರ ಸವಿಯುವ ಸಂದರ್ಭದಲ್ಲಿ ಸಿಎಂ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಘಟನೆ ಗಮನ ಸೆಳೆದಿದೆ. ನಂತರ ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಸ್ಮರಣಾರ್ಥ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೈಸೂರಿನ ಟಿ.ಕೆ. ಬಡಾವಣೆಯಲ್ಲಿರುವ ನಿವಾಸದ ಮುಂಭಾಗದಲ್ಲಿ ‘ಸಮತಾ ಟ್ರಸ್ಟ್’ ವತಿಯಿಂದ ಉಚಿತ ಸೇವೆಗೆ ಎರಡು ಆಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
For More Updates Join our WhatsApp Group :




