ನೆಲಮಂಗಲದಲ್ಲಿ ‘ಬಿಷ್ಣೋಯ್ ಗ್ಯಾಂಗ್’ ಹೆಸರಿನಲ್ಲಿ ಧಮ್ಕಿ ಪ್ರಕರಣ
ನೆಲಮಂಗಲ: ಮಹಾರಾಷ್ಟ್ರ ನೋಂದಣಿ ಇಲ್ಲದ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದ ಅಧಿಕಾರಿಗೆ ಅಪರಿಚಿತರಿಂದ ಬೆದರಿಕೆ ಕರೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಪ್ರವಾಸದಲ್ಲಿದ್ದ RTO ಅಧಿಕಾರಿ ಗುರಿ
ಆಲ್ ಇಂಡಿಯಾ ಮೋಟಾರ್ ವೆಹಿಕಲ್ ಫೆಡರೇಷನ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ಗೆ ಬಂದಿದ್ದ ಪ್ರಸಾದ್ ಶಿವದಾಸ್ ನಾಲ್ವಡೆ ಅವರಿಗೆ ಈ ಬೆದರಿಕೆ ಕರೆ ಬಂದಿದೆ.
‘ಬಿಷ್ಣೋಯ್ ಗ್ಯಾಂಗ್’ ಹೆಸರಿನಲ್ಲಿ ಧಮ್ಕಿ
ಅಧಿಕಾರಿಗೆ ‘ಬಿಷ್ಣೋಯ್ ಗ್ಯಾಂಗ್’ ಹೆಸರಿನಲ್ಲಿ ಕರೆ ಮಾಡಿ, ಆಟೋ ಚಾಲಕರ ವಿರುದ್ಧ ಕ್ರಮ ಮುಂದುವರಿಸಿದರೆ ಕುಟುಂಬಕ್ಕೆ ಪರಿಣಾಮ ಬೀರುತ್ತದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ
ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಲಾಗಿದೆ.ಮಹಾರಾಷ್ಟ್ರದಲ್ಲಿ ದಾಖಲೆ ಇಲ್ಲದ ವಾಹನಗಳ ವಿರುದ್ಧ ಕೈಗೊಂಡ ಕಠಿಣ ಕ್ರಮವೇ ಈ ಬೆದರಿಕೆಯ ಹಿಂದಿರುವ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕರೆ ಮಾಡಿದ ವ್ಯಕ್ತಿಗಳ ಹಾಗೂ ಸಂಘಟಿತ ಗ್ಯಾಂಗ್ ಸಂಪರ್ಕಗಳ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
For More Updates Join our WhatsApp Group :




