ಚಿಕ್ಕಬಳ್ಳಾಪುರ: ತಾಲೂಕಿನ ಕಂಬತ್ತನಹಳ್ಳಿ ಗ್ರಾಮದ ಒಂದೇ ಕುಟುಂಬದ ಮೂವರು ವ್ಯಕ್ತಿಗಳು ಕೆರೆಯಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರಂಜಿತ್(27), ರಮ್ಯಾ(24), ಅಭಿಲಾಶ್(21) ಮೃತ ದುರ್ದೆÊವಿಗಳು. ದೀಪಾವಳಿ ಹಬ್ಬದ ಪ್ರಯುಕ್ತ ಸಂಬOಧಿಗಳು ಊಟಕ್ಕೆ ಸೇರಿದ್ದರು. ಊಟದ ನಂತರ ಈಜಾಡಲು ಕೆರೆಗೆ ಇಳಿದಿದ್ದಾರೆ. ಆದರೆ ಆಳ ಅರಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಮನಗರ ಮೂಲದ ರಮ್ಯಾ, ಚಂದಪುರ ಮೂಲದ ಅಭಿಲಾಷ್ ಮತ್ತು ಶ್ರೀನಿವಾಸಪುರ ಮೂಲದ ಎಸ್. ರಂಜೀತ್ ಕುಮಾರ್ ದೀಪಾವಳಿ ಹಬ್ಬದ ಪ್ರಯುಕ್ತ ಸಂಬOಧಿಕರ ಮನೆಗೆ ಮೂವರು ಆಗಮಿಸಿದ್ದಾಗ ಅವಘಡ ಸಂಭವಿಸಿದೆ. ಸದ್ಯ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ, ಎಎಸ್ಪಿ ಆರ್.ಐ ಖಾಸಿಂ, ಡಿವೈಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.