ಬೆಂಗಳೂರು:ಕರ್ನಾಟಕದಲ್ಲಿ ಚುನಾವಣೆ ಕಾರ್ಯಾಚರಣೆಗಳು ತೀವ್ರವಾಗಿರುವ ಸಮಯದಲ್ಲಿ, ರಾಜ್ಯ ಚುನಾವಣಾ ಆಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮುಂದೂಡುವಂತೆ ಪತ್ರ ಬರೆದಿದೆ. ಮುಂಬರುವ ಜಿಬಿಎ (BBMP) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆ ಹಿನ್ನೆಲೆ ಈ ತೀರ್ಮಾನ ಕೈಗೊಂಡಿದೆ.
ಕೇಂದ್ರಕ್ಕೆ ಇ-ಮೇಲ್ ಮೂಲಕ ಮನವಿ
ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು, ಮಂಗಳವಾರ ಕೇಂದ್ರ ಚುನಾವಣಾ ಆಯುಕ್ತರಿಗೆ ಇ-ಮೇಲ್ ಕಳುಹಿಸಿ, ನ.1ರಿಂದ ಜಿಬಿಎ ಚುನಾವಣೆ ಸಂಬಂಧ ಕಾರ್ಯ ಆರಂಭವಾಗಲಿರುವ ಕಾರಣ, ಈ ವೇಳೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕೈಗೊಳ್ಳುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿ ಕೊರತೆಯೂ ಪ್ರಮುಖ ಕಾರಣ
ಆಯುಕ್ತರ ಮಾತುಗಳಲ್ಲಿ, ಈಗಾಗಲೇ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದೆ. ಈ ಸಮೀಕ್ಷೆಗೆ ಬಹುತೆಕ ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದೇ ಸಿಬ್ಬಂದಿಯನ್ನು ಮತದಾರರ ಪಟ್ಟಿ ಪರಿಷ್ಕರಣೆಗೆ ಬಳಸಬೇಕಾದರೆ, ಎರಡೂ ಕಾರ್ಯಗಳಲ್ಲಿ ಅಡಚಣೆ ಉಂಟಾಗಲಿದೆ ಎಂಬ ಕಾರಣವನ್ನು ಅವರು ತಿಳಿಸಿದ್ದಾರೆ.
ಬ್ಯಾಲೆಟ್ ಪೇಪರ್ ಕುರಿತು ನಿರ್ಧಾರ
ಜಿಬಿಎ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಬಳಕೆಯ ಸಾಧ್ಯತೆಯ ಬಗ್ಗೆ ಸರ್ಕಾರದಿಂದ ನಿರ್ಧಾರವಿದೆ. ಈ ವಿಷಯದಲ್ಲೂ ಪರಿಶೀಲನೆ ಮಾಡಬೇಕಿದೆ. ಹೀಗಾಗಿ ಎಲ್ಲಾ ಪ್ರಕ್ರಿಯೆಗಳ ಮಧ್ಯೆ ಪಟ್ಟಿ ಪರಿಷ್ಕರಣೆ ಕಮ್ಮಿ ಮಾಡುವುದು ಶ್ರೇಷ್ಟ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ಗೆ ಅಫಿಡವಿಟ್
ನವೆಂಬರ್ 3ರಂದು ಸುಪ್ರೀಂ ಕೋರ್ಟ್ಗೆ ಕಂಪ್ಲಾಯನ್ಸ್ ಅಫಿಡವಿಟ್ ಸಲ್ಲಿಸಬೇಕಿರುವ ರಾಜ್ಯ ಚುನಾವಣಾ ಆಯೋಗ, ಸರ್ಕಾರದ ಡಿಲಿಮಿಟೇಶನ್ ವರದಿ ನಿರೀಕ್ಷಿಸುತ್ತಿದೆ. ಈ ವರದಿ ಲಭ್ಯವಾದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಯುಕ್ತ ಸಂಗ್ರೇಶಿ ತಿಳಿಸಿದ್ದಾರೆ.
For More Updates Join our WhatsApp Group :




