ಕರ್ನಾಟಕದಲ್ಲಿ ಕೇವಲ 17% ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ.
ಬೆಂಗಳೂರು: ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ 17% ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ಶಿಕ್ಷಣ ಪರಿವರ್ತನೆ ಸಮಿತಿಯ ವರದಿಯಲ್ಲಿ ಬಹಿರಂಗವಾಗಿದೆ.
ಉಳಿದ 83% ವಿದ್ಯಾರ್ಥಿಗಳು ಕೌಶಲ್ಯ ಕೊರತೆ ಮತ್ತು ಮಾರುಕಟ್ಟೆ ಬೇಡಿಕೆಗೆ ಹೊಂದಿಕೆಯಾಗದ ಶಿಕ್ಷಣದಿಂದ ಉದ್ಯೋಗವಿಲ್ಲದೆ ಉಳಿಯುತ್ತಿದ್ದಾರೆ ಎಂದು ವರದಿ ಹೇಳುತ್ತದೆ.ಸೆಮಿಕಂಡಕ್ಟರ್, ಏರೋಸ್ಪೇಸ್, ಎಲೆಕ್ಟ್ರಿಕ್ ವಾಹನಗಳು ಮತ್ತು ಕ್ಲೀನ್ ಎನರ್ಜಿ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳಿದ್ದರೂ ತಜ್ಞರ ಕೊರತೆ ಎದುರಾಗಿದೆ.ಈ ಸಮಸ್ಯೆ ಪರಿಹರಿಸಲು ‘ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಪ್ರಾಧಿಕಾರ’ (KERA) ರಚನೆಗೆ ಸರ್ಕಾರ ಮುಂದಾಗಿದೆ.
ಕೇವಲ CSE ವ್ಯಾಮೋಹದಿಂದ ಕಾಲೇಜು ಆಯ್ಕೆ ಮಾಡದೆ, ಮಾರುಕಟ್ಟೆ ಬೇಡಿಕೆ ಮತ್ತು ಕಾಲೇಜಿನ ಗುಣಮಟ್ಟ ಪರಿಶೀಲಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




