ಬೆಂಗಳೂರು: ಲೂಟಿ ಮಾಡಿದ್ದು ಸಾಕು, ಅಭಿವೃದ್ಧಿಗೆ ಸಹಕಾರ ನೀಡಿ. ನನ್ನ ಮೇಲಿನ ಧ್ವೇಷಕ್ಕೆ ರಾಜ್ಯ ಹಾಳು ಮಾಡಬೇಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ,(HD Kumarswamy) ಡಿಸಿಎಂ ಡಿ.ಕೆ.ಶಿವಕುಮಾರ್(DK Shivkumar) ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಎಂ.ಟಿ(HMT) ಕಾರ್ಖಾನೆಗೆ ಜೀವತುಂಬಬೇಕು ಎಂದು ನಾನು ಶ್ರಮ ಪಡುತ್ತಿದ್ದೇನೆ. ಲೂಟಿ ಮಾಡುವುದನ್ನು ನಿಲ್ಲಿಸಿ ಸಹಕಾರ ನೀಡಿ ಎಂದು ತಿಳಿಸಿದ್ದಾರೆ.
ಪುಟ್ಟೇನಹಳ್ಳಿ ಕೆರೆ ಮುಚ್ಚಿ ಡಾಲರ್ಸ್ ಕಾಲೋನಿ ಮಾಡಿದ್ರು. ನಾನು ಅಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಮಾಡಿ ತೋರಿಸುತ್ತೇನೆ. ಪ್ರತಿದಿನ ಅಲ್ಲಿ ರೌಂಡ್ಸ್ ಗೆ ಹೋಗುವ ನೀವು ಜನರಿಗೆ ಏನು ಮಾಡಿಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಲಾಟರಿ ಸಿಸ್ಟಮ್ ನಲ್ಲೇ ನನಗೆ ಪ್ರತಿಬಾರಿ ಅಧಿಕರ ಸಿಕ್ಕಿದೆ. ಆ ಲಾಟರಿ ಅಧಿಕಾರದಲ್ಲೇ ಜನರಿಗೆ ಆದಷ್ಟು ಒಳ್ಳೆಯ ಕೆಲಸ ಮಾಡ್ತಿದ್ದೇನೆ. ಆದರೆ ನೀವೇನು ಮಾಡಿದ್ದೀರಿ? ಎಂದು ಕೇಳಿದ್ದಾರೆ.
ನಿನ್ನೆ ಬೆಂಗಳೂರು ರೌಂಡ್ಸ್ ಹೋಗೀದ್ದೀರಲ್ಲ? ಬ್ರ್ಯಾಂಡ್ ಬೆಂಗಳೂರು ಮಾಡ್ತೀನಿ ಅಂತೀರಲ್ಲ? ಬ್ರ್ಯಾಂಡ್ ಬೆಂಗಳೂರಾ? ಬ್ಯಾಡ್ ಬೆಂಗಳೂರಾ? ಎಂದು ಕಿಡಿಕಾರಿದ್ದಾರೆ. ಹೆಚ್.ಎಂ.ಟಿಗೆ ಕೈಗಾರಿಕೆಗೆ ಭೂಮಿ ಕೊಟ್ಟಿದ್ದಾರೆ. ಅದನ್ನು ವಶಪಡಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಹೆಚ್.ಎಂ.ಟಿಗೆ ಲ್ಯಾಂಡ್ ಯಾವ ರೀತಿ ಬಂತು? ನೆಹರು ಕಾಲದಲ್ಲಿಯೇ ವಾಚ್ ಮತ್ತು ಬೆಲ್ಟ್ ತಯಾರಿಕೆಗೆ ಕಾರ್ಖಾನೆ ಆರಂಭವಾಗಿತ್ತು. ಪ್ರತಿ ವರ್ಷ ಹೊಸ ಯುನಿಟ್ ಆರಂಭ ಮಾಡುತ್ತಿದ್ದರು. ಈಗ ನಿನ್ನೆ ಸಚಿವರು ಟಿಪ್ಪಣಿ ಬರೆದದ್ದು ಯಾಕೆ? ಸಚಿವರು ಸೂಚನೆ ಕೊಟ್ಟ ತಕ್ಷಣ ಹೆಚ್.ಎಂ.ಟಿ ಜಾಗ ವಶ ಪಡಿಸಿಕೊಳ್ಳಲಾಗುತ್ತಾ? ನಾನು ಹೆಚ್.ಎಂ.ಟಿಗೆ ಭೇಟಿ ನೀಡಿ ಅದನ್ನು ಉಳಿಸಲು ನನ್ನದೇ ರೀತಿಯಲ್ಲಿ ಶ್ರಮ ಹಾಕುತ್ತಿದ್ದೇನೆ ಹಕಾರ ಕೊಡಿ ಎಂದರು.