ಕೇಂದ್ರ ಸರ್ಕಾರದ ಕಬ್ಬು ದರ ಘೋಷಣೆ ವಿರುದ್ಧ ಆಕ್ರೋಶ: ರೈತರಿಗೆ ನ್ಯಾಯಸಮತ ಬೆಲೆಗಾಗಿ ಹೋರಾಟ
ಬೆಂಗಳೂರು: ಕೇಂದ್ರ ಸಚಿವ ಸಂಪುಟ ನೆನ್ನೆ ತೀರ್ಮಾನಿಸಿ ಘೋಷಣೆ ಮಾಡಿರುವ 2026- 27ನೇ ಸಾಲಿಗೆ 10.25 ಸಕ್ಕರೆ ಇಳುವವರಿ ಟನ್ ಕಬ್ಬಿಗೆ 3650 ರೂ ರೈತರ ಉತ್ಪಾದನ ವೆಚ್ಚಕಿಂತ ಕಡಿಮೆಯಾಗಿದೆ. ಕರ್ನಾಟಕ ಸರ್ಕಾರ 4450 ನಿಗದಿ ಮಾಡಬೇಕೆಂದು ವರದಿ ನೀಡಿದೆ ಇದನ್ನು ಗಮನಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕಾಗಿತ್ತು. ಇದು ರೈತರನ್ನು ಕಬ್ಬು ಬೆಳೆಯಿಂದ ಒಕ್ಕಲಿಬಿಸುವ ಕಾರ್ಯವಾಗಿದೆ. ಕೂಡಲೇ ಎಫ್ಆರ್ಪಿ ದರ ಪುನರ್ ಪರಿಸಿಲಿಸಿ ಟನ್ ಕಬ್ಬಿಗೆ 4500. ನಿಗದಿಗೊಳಿಸಬೇಕು
ಕಬ್ಬಿನಿಂದ ಸಕ್ಕರೆ ಎತ್ನಾಲ್. ವಿದ್ಯುತ್. ಕಾಂಪೋಸ್ಟ್ ಗೊಬ್ಬರ ಇನ್ನು ಇತರ ಉತ್ಪನ್ನಗಳನ್ನು ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ನಿರಂತರವಾಗಿ ವಂಚನೆ ಮಾಡುತ್ತಿವೆ. ಸರ್ಕಾರದ ಆದೇಶಗಳನ್ನು ವಾಮ ಮಾರ್ಗದಲ್ಲಿ ನಿರ್ಲಕ್ಷಿಸುತ್ತಿವೆ. ಕಬ್ಬಿನ ಹಣ ಪಾವತಿ ಸಕಾಲಕ್ಕೆ ಸಮರ್ಪಕವಾಗಿ ಮಾಡುತ್ತಿಲ್ಲ. ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರ ಸಕ್ಕರೆ ನಿಯಂತ್ರಣ ಕಾಯ್ದೆ 1966 ತಿದ್ದುಪಡಿ ಮಾಡಿ. ಕಾನೂನು ಉಲ್ಲಂಗಿಸುವ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಶಿಕ್ಷೆ ಮಾಡುವ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
For More Updates Join our WhatsApp Group :
https://chat.whatsapp.com/JVoHqE476Wn3pVh1gWNAcH




