ಕುಣಿಗಲ್ ತಾಲೂಕಿನಲ್ಲಿ ಒಂದೇ ತಿಂಗಳಿನಲ್ಲಿ ಇಬ್ಬರು ಕಾಣೆ

ಕುಣಿಗಲ್ ತಾಲೂಕಿನಲ್ಲಿ ಒಂದೇ ತಿಂಗಳಿನಲ್ಲಿ ಇಬ್ಬರು ಕಾಣೆ

ತುಮಕೂರು :  ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 2 ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

ಪ್ರಕರಣ-1: ಸುಮಾರು 58 ವರ್ಷದ ಗಂಗಾಧರಯ್ಯ ಎಂಬ ವ್ಯಕ್ತಿಯು ಸೆಪ್ಟೆಂಬರ್ 25 ರಂದು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೋದವರು ಮರಳಿ ಬಂದಿರುವುದಿಲ್ಲವೆಂದು ಮಗ ನಂಜೇಶ್ ಠಾಣೆಗೆ ನಂಜೇಶ್ ಠಾಣೆಗೆ ದೂರು ನೀಡಿದ್ದಾರೆ.  ಈತನು 5.15 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಲುಂಗಿ ಮತ್ತು ಷರ್ಟ್ ಧರಿಸಿರುತ್ತಾನೆ.

ಪ್ರಕರಣ-2: ಸುಮಾರು 17 ವರ್ಷದ ಪವನ್ ಕುಮಾರ್ ಸಿದ್ದಪ್ಪ ನೀಲಿ ಶೆಟ್ಟರ್ ಎಂಬ ಬಾಲಕನು ಸೆಪ್ಟೆಂಬರ್ 19 ರ ಬೆಳಿಗ್ಗೆ 10 ಗಂಟೆಯಿಂದ ಕಾಣೆಯಾಗಿದ್ದಾನೆ ಎಂದು ಈತನ ತಾಯಿ ಠಾಣೆಗೆ ದೂರು ನೀಡಿದ್ದಾರೆ. ಈತನು 5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾನೆ.  ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಷರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು.

ಕಾಣೆಯಾದ ಇವರ ಬಗ್ಗೆ ಸುಳಿವು ಸಿಕ್ಕವರು ದೂ.ವಾ.ಸಂ. 08132-220229, 0816-2272451ನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *