ಬೆಂಗಳೂರು: ಯಡಿಯೂರು ವಾರ್ಡ್, ಸೌತ್ ಎಂಡ್ ವೃತ್ತದಲ್ಲಿ ಯಡಯೂರು ನಾಗರಿಕರ ವೇದಿಕೆ ವತಿಯಿಂದ ಮೇರುನಟ ಡಾ||ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ರವರ ಕಂಚಿನ ಪುತ್ಥಳಿಯ ಪಕ್ಕದಲ್ಲಿ ಕರ್ನಾಟಕ ರತ್ನ , ಪವರ್ ಸ್ಟಾರ್ ಡಾ||ಪುನೀತ್ ರಾಜ್ ಕುಮಾರ್ ರವರ ಕಂಚಿನ ಪುತ್ಥಳಿಯ ಅನಾವರಣ ಕಾರ್ಯಕ್ರಮ.
ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಆಡಳಿತ ಪಕ್ಷದ ಮಾಜಿ ನಾಯಕ, ಅಖಿಲ ಕರ್ನಾಟಕ ಡಾ||ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷರಾದ ಎನ್.ಆರ್.ರಮೇಶ್ ರವರು, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಹೆಚ್.ಬಸವರಾಜ್ ರವರು ಪುತ್ಥಳಿಯನ್ನು ಅನಾವರಣ ಮಾಡಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರವರು ಮಾತನಾಡಿ ದೇಶದ ಪ್ರತಿಭಾವಂತ ನಟ ಎಂದು ಖ್ಯಾತಿ ಗಳಿಸಿರುವ ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಯನ್ನು ಪಾರ್ವತಮ್ಮ ರಾಜ್ ಕುಮಾರ್ ರಸ್ತೆಯಲ್ಲಿ ಸ್ಥಾಪಿಸಲಾಗಿದೆ.
ಪುನೀತ್ ರಾಜ್ ಕುಮಾರ್ ಅಗಲಿಕೆಯಾಗಿ ಮೂರು ವರ್ಷವಾಯಿತು ಅದರು ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಪುನೀತ್ ರಾಜ್ ಕುಮಾರ್ ರವರ ಅಂತ್ಯಸಂಸ್ಕಾರದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು.
ಕಲಾವಿದ ಮತ್ತು ಮಾನವೀಯತೆ ಮೂಲಕ ಜನರ ಪ್ರೀತಿ ಗಳಿಸಿದ ಮೆಚ್ಚಿನ ಹೃದಯವಂತ ನಾಯಕ ಪುನೀತ್ ರಾಜ್ ಕುಮಾರ್ ರವರು.
ಸರಳತೆ, ವಿನಯತೆ ಮೂಲಕ ಜನರ ಹೃದಯಗೆದ್ದರು, ನಾನು ಸಹ ರಾಜ್ ಕುಮಾರ್ ರವರ ಅಭಿಮಾನಿ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.
ಎನ್.ಆರ್.ರಮೇಶ್ ರವರು ಮಾತನಾಡಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರು ಯುವ ಸಮೂದಕ್ಕೆ ಸ್ಪೂರ್ತಿಯಾಗಿದ್ದಾರೆ. ಯಡಿಯೂರು ವಾರ್ಡ್ ನಲ್ಲಿ ಕಂಚಿನ ಪುತ್ಥಳಿ ಸ್ಥಳದಲ್ಲಿ ಕಂಠೀರವ ಸ್ಟೂಡಿಯೋದಲ್ಲಿ ಪುಣ್ಯಭೂಮಿಯಿಂದ ಮಣ್ಣನ್ನು ತಂದ ಪುನೀತ್ ರಾಜ್ ಕುಮಾರ್ ಪುತ್ಥಳಿ ಜಾಗ ನಿರ್ಮಿಸಲಾಗಿದೆ.
ಯಡಿಯೂರು ವಾರ್ಡ್ ಇಡಿ ಏಷಿಯದ ಅಭಿವೃದ್ದಿಯಾದ ನಂಬರ್ 1 ವಾರ್ಡ್ ಎಂದು ಕೀರ್ತಿಗಳಿಸಿದೆ.
ಡಾ||ರಾಜ್ ಕುಮಾರ್ ಮತ್ತು ಪಾರ್ವತಮ್ಮರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ ರವರು ಕಂಚಿನ ಪುತ್ಥಳಿ ಒಂದೇ ಜಾಗದಲ್ಲಿ ನಿರ್ಮಾಣವಾಿರುವುದು ರಾಜ್ಯದಲ್ಲಿಯೆ ಪ್ರಥಮ ಜಾಗ ಯಡಿಯೂರು ವಾರ್ಡ್.
ಪುನೀತ್ ರಾಜ್ ಕುಮಾರ್ ರವರ ಆದರ್ಶ ಗುಣಗಳು, ಸರಳತೆ ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು