ಮರ್ಯಾದೆ ಪ್ರಶ್ನೆ – ಮರ್ಯಾದೆ ಪ್ರಶ್ನೆ ನಾಗರಾಜ್ ಸೋಮಯಾಜಿ ನಿರ್ದೇಶನದ ಕನ್ನಡ ಚಲನಚಿತ್ರ. ಬೆಂಗಳೂರಿನ ಕೆಳ ಮಧ್ಯಮ ವರ್ಗದ ಜನರ ಹೋರಾಟಗಳು ಮತ್ತು ಸ್ನೇಹದ ಶಕ್ತಿಯ ಕುರಿತಾದ ಕಥೆ ಇದಾಗಿದ್ದು, ಚಿತ್ರದಲ್ಲಿ ರಾಕೇಶ್ ಅಡಿಗ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಶೈನ್ ಶೆಟ್ಟಿ, ರೇಖಾ ಕೂಡ್ಲಿಗಿ, ಮತ್ತು ನಾಗೇಂದ್ರ ಶಾ ಸೇರಿದಂತೆ ಹಲವರು ನಟಿಸಿದ್ದಾರೆ.
ಟೆನಂಟ್- ಈ ಸಿನಿಮಾವನ್ನು ವಯ್.ಯುಗಂಧರ್ ನಿರ್ದೇಶಸಿದ್ದು, ಧರ್ಮ ಕೀರ್ತಿರಾಜ, ತಿಲಕ್ ಶೇಖರ್, ಸೊನು ಗೌಡ, ರಕೇಶ್ ಮೈಯಾ, ಉಗ್ರಂ ಮಂಜು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೋಂದು ಕ್ರೈಮ್, ಮಿಸ್ಟ್ರಿ, ಸಸ್ಪೆಂಸ್ ತ್ರಿಲ್ಲರ್ ಕಥೆಯಾಗಿದೆ.
ದ್ವಿಜಾ- ಈ ಸಿನಿಮಾವನ್ನು ಗಿರಿ ಲಕ್ಷ್ಮಣ್ ನಿರ್ದೇಶಿಸಿದ್ದು, ಲಡ್ಡು ಗೋಪಾಲ್, ಸತ್ಯ ಬಿ ಜಿ, ದಿಲಿಪ್ ಕುಮಾರ್ ಎಲ್, ಸೃಷ್ಟಿ ರಾಘವೇಂದ್ರ, ಮನಿಶಾ ಭಟ್, ಗಗನ್ ಟಿಜಿ ಸೇರಿದಂತೆ ಹಲವರು ನಟಿಸಿದ್ದಾರ. ಮತ್ತು ಇದು ಒಂದು ಮಿಸ್ಟ್ರಿ ಮೂವಿ ಅಂದ್ರೆ ತಪ್ಪಗಲ್ಲ.