ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬ್ಲಾಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಮಧುಗಿರಿ ಉಪ ಕಾರಾಗೃಹದಿಂದ ರಿಲೀಸ್ ಆದ ಡ್ರೋನ್ ಪ್ರತಾಪ್ ಅವರು ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ್ದಾರೆ.
ಸೋಡಿಯಂ ಮೆಟಲ್ ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಡ್ರೋನ್ ಪ್ರತಾಪ್ ಅವರು ಕಳೆದ 9 ದಿನಗಳಿಂದ ಸೆರೆವಾಸದಲ್ಲಿ ಇದ್ದರು. ನಿನ್ನೆ ಮಧುಗಿರಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಡ್ರೋನ್ ಪ್ರತಾಪ್ ಅವರ ಜಾಮೀನು ಮಂಜೂರು ಮಾಡಿತ್ತು. ಮೊದಲ 3 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರೋನ್ ಪ್ರತಾಪ್ ಅವರು 9 ದಿನಗಳ ನ್ಯಾಯಾಂಗ ಬಂಧನದ ಬಳಿಕ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.
ನಾನು ಒಂದೇ ಒಂದು ಪ್ರಶ್ನೆ ಕೇಳ್ತೀನಿ. ಇಡೀ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಬೇರೆಯವರೆಲ್ಲಾ ಕೆಜಿಗಟ್ಟಲೇ ಸೋಡಿಯಂ ಬಳಸಿ ಸೈನ್ಸ್ ಎಕ್ಸ್ಪರಿಮೆಂಟ್ ಮಾಡಿದ್ದಾರೆ. ಯ್ಯೂಟೂಬ್ನಲ್ಲಿ ಶಾರ್ಟ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
CRAZY XYZ, MISTER INDIAN HACKER ಯೂಟ್ಯೂಬರ್ಗಳು ಇದೇ ರೀತಿ ಮಾಡಿದ್ದಾರೆ. ನಮ್ಮ ದೇಶದವರೇ, ಜಾಸ್ತಿ ಜನ ಸಬ್ ಸ್ಕ್ರೈಬರ್ ಹೊಂದಿರೋ ಯೂಟ್ಯೂಬ್ ಚಾನೆಲ್ಗಳು ಇವು. ಅವ್ರಿಬ್ಬರೇ ಅಂತ ಅಲ್ಲ, ತುಂಬಾ ಜನ ಈ ರೀತಿಯ ಎಕ್ಸ್ಪರಿಮೆಂಟ್ ಮಾಡಿದ್ದಾರೆ. ಯಾರ ಮೇಲೂ ಕೇಸ್ ಆಗದೇ ಇರೋದನ್ನ ನಾನು ಪ್ರಶ್ನೆ ಮಾಡುತ್ತಾ ಇದ್ದೀನಿ.
ನಾನು ಮಾಡಿರೋದು ಸೈನ್ಸ್ ಅಂಡ್ ಎಜುಕೇಷನ್ ಉದ್ದೇಶಕ್ಕಾಗಿೆ. ಮೊದಲೇ ಡಿಸ್ಕೈಮರ್ ಹಾಕಿ ಮಾಡಿದ್ದೇನೆ. ಸಿಂಪಲ್ ಸೈನ್ಸ್ ಎಕ್ಸ್ಪೆರಿಮೆಂಟ್ ಅದು. ಕಾಲೇಜು, ಸ್ಕೂಲ್ಗಳಲ್ಲಿ ಸೋಡಿಯಂ ಸುಲಭವಾಗಿ ಸಿಗೋ ಮೆಟಿರೀಯಲ್ ಬಳಸಿದ್ದೇನೆ. ಅದಕ್ಕೆ ಎಕ್ಸ್ಪ್ಲೋಸಿವ್ ಅದು ಇದು ಅಂತಾ ಮಾಡೋದು ಅಗತ್ಯ ಇರಲಿಲ್ಲ. ನನ್ನ ಮೇಲೆ ಆಗಿರೋದು, ಅವರ ಮೇಲೆ ಯಾಕೆ ಅಗಿಲ್ಲ. ನನಗಿಂತಾ ಮೊದಲೇ ಅವ್ರೆಲ್ಲಾ ಮಾಡಿದ್ದಾರೆ.
ಅದು ಅರ್ಟಿಫಿಷಿಯಲ್ ಪಾಂಡ್. ಅವರ ಮೇಲೆ ಏನು ಅಗದೇ ನನ್ನ ಮೇಲೆ ಮಾತ್ರ ಮಾಡ್ತಾರೆ ಅಂದ್ರೆ ನನ್ನ ಟಾರ್ಗೆಟ್ ಮಾಡ್ತಾರೆ ಅಂದ್ರೆ ನನಗೆ ನ್ಯಾಯ ಬೇಕು ಸರ್ ಎಂದು ಮಧುಗಿರಿ ಉಪಕಾರಾಗೃಹದ ಬಳಿ ಡ್ರೋನ್ ಪ್ರತಾಪ್ ಹೇಳಿಕೆ ನೀಡಿದ್ದಾರೆ.