ಅಜ್ಜೇನಹಳ್ಳಿಯಲ್ಲಿ ದೇವಾಲಯ ಪ್ರತಿಷ್ಠಾಪನೆ ಮಹೋತ್ಸವ.!

ಅಜ್ಜೇನಹಳ್ಳಿಯಲ್ಲಿ ದೇವಾಲಯ ಪ್ರತಿಷ್ಠಾಪನೆ ಮಹೋತ್ಸವ.!

ಗುರುಬಿರಲಿಂಗೇಶ್ವರಸ್ವಾಮಿ ದೇವಾಲಯ ಉದ್ಘಾಟನೆ ಅದ್ದೂರಿ.

ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಸುಕ್ಷೇತ್ರ ಅಜ್ಜೇನಹಳ್ಳಿಯಲ್ಲಿ ಶ್ರೀ ಗುರುಬಿರಲಿಂಗೇಶ್ವರಸ್ವಾಮಿ ನೂತನ ದೇವಾಲಯದ ಪ್ರತಿಷ್ಠಾಪನೆ ಮಹೋತ್ಸವ ಅದ್ದೂರಿಯಾಗಿ ನೆರವೇರಿತು

ಮಹೋತ್ಸವದ ಅಂಗವಾಗಿ ವಿಮಾನ ರಾಜಗೋಪುರ ನಿರ್ಮಾಣ, ಬ್ರಹ್ಮಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ವಿಧಿವಿಧಾನಗಳು ವೈದಿಕ ಕ್ರಮದಲ್ಲಿ ಜರುಗಿದವುಏಪ್ರಿಲ್ 19ರಂದು ಕನಕ ಪುತ್ತಳಿ ಅನಾವರಣ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತುಏಪ್ರಿಲ್ 20ರಂದು ಧಾರ್ಮಿಕ ಸಮಾರಂಭಗಳು, ವಿಶೇಷ ಪೂಜೆಗಳು, ಹೋಮ-ಹವನಗಳು ಹಾಗೂ ವೇದಿಕೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು

ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವಾಗಿ ಕಾಗಿನೆಲೆ ಕನಕ ಗುರುಪೀಠ, ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಗಳು ಭಾಗವಹಿಸಿದರುಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಶಾಸಕರಾದ ಸಿ.ಬಿ. ಸುರೇಶ್ ಬಾಬು ವಹಿಸಿಕೊಂಡರುಉದ್ಯಮಿ ಅಜ್ಜೇನಹಳ್ಳಿಯ ಶ್ರೀಮತಿ ಮಮತಾ ಎಬಿ ಕೃಷ್ಣಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು

ಮುರುಡೇಶ್ವರ ಮೂಲದ ನಿಪುಣ ಶಿಲ್ಪಿಗಳ ತಂಡ ದೇವಾಲಯದ ಶಿಲ್ಪ ಕೆತ್ತನೆ ಕಾರ್ಯವನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಿರ್ವಹಿಸಿದ್ದು, ದೇವಾಲಯದ ಸೌಂದರ್ಯ ಹೆಚ್ಚಿಸಿದೆಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.

ಭಕ್ತರಿಗೆ ಪ್ರಸಾದ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತುಗ್ರಾಮಸ್ಥರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಒಗ್ಗೂಡಿ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದರು

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *