ಪೋಕ್ಸೋ ಭಯಕ್ಕೆ ವಿಚಿತ್ರ ನಡೆ: 3 ದಿನಗಳ ಬಳಿಕ ಮಲದ ಮೂಲಕ ಕೀ ಹೊರಬಂದಿತು.!
ಬೆಂಗಳೂರು: ಉತ್ತರದ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಘಟನೆೊಂದು ನಡೆದಿದೆ. ವಿಚಾರಣೆ ವೇಳೆ ಆರೋಪಿ ಕಾರ್ತಿಕ್ ಅಲಿಯಾಸ್ ರಾಮು ಲಾಕರ್ ಕೀ ನುಂಗಿ ಪೊಲೀಸರಿಗೇ ಶಾಕ್ ನೀಡಿದ್ದಾನೆ. ಬಳ್ಳಾರಿ ಮೂಲದ ಈ ಯುವಕ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋದ ಆರೋಪದ ಹಿನ್ನೆಲೆ ಪೊಲೀಸರ ವಶಕ್ಕೆ ಬಂದಿದ್ದ.
ಏಪ್ರಿಲ್ 24ರಂದು ಬಾಲಕಿ ಪೋಷಕರು ನಾಪತ್ತೆ ದೂರು ನೀಡಿದ ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತರಲಾಗಿತ್ತು. ವಿಚಾರಣೆ ವೇಳೆ ಪೋಕ್ಸೋ ಪ್ರಕರಣದ ಭಯದಿಂದ ಆತ ಲಾಕರ್ ಕೀ ನುಂಗಿದ್ದಾನೆ ಎನ್ನಲಾಗಿದೆ. ಈ ಘಟನೆ ಪೊಲೀಸ್ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದ್ದು, ತಕ್ಷಣವೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೀ ಹೊರಬರುವಂತೆ ಮಾಡಲು ಪೊಲೀಸರು ವೈದ್ಯರ ಸಲಹೆಯಂತೆ ಆರೋಪಿಗೆ ಸುಮಾರು 10 ಕೆಜಿ ಬಾಳೆಹಣ್ಣು ತಿನ್ನಿಸಿದ್ದಾರೆ. ಮೂರು ದಿನಗಳ ಚಿಕಿತ್ಸೆ ಬಳಿಕ ಮಲದ ಮೂಲಕ ಕೀ ಹೊರಬಂದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಆರೋಪಿಯ ವಿಚಿತ್ರ ನಡೆ ಮಾತ್ರವಲ್ಲದೆ, ಪೋಕ್ಸೋ ಪ್ರಕರಣಗಳ ಗಂಭೀರತೆಯನ್ನೂ ತೋರಿಸುತ್ತದೆ. ಅಪ್ರಾಪ್ತರ ಸಂಬಂಧಿತ ಪ್ರಕರಣಗಳಲ್ಲಿ ಕಾನೂನು ಕ್ರಮ ಎಷ್ಟು ಕಠಿಣವಾಗಿರುತ್ತದೆ ಎಂಬುದಕ್ಕೆ ಇದು ಉದಾಹರಣೆ ಎನ್ನಬಹುದು.
For More Updates Join our WhatsApp Group :




