ಹಠಾತ್ ಕುಸಿದು ಕೋಮಾಗೆ ಜಾರಿದ 25 ವರ್ಷದ ಯುವತಿ; ಕುಟುಂಬದಲ್ಲಿ ಶೋಕ
ಹಾಸನ : Hassan ಜಿಲ್ಲೆಯ ಬೇಲೂರು ತಾಲೂಕಿನ ಬಂಡಿಲಕ್ಕನಕೊಪ್ಪಲು ಗ್ರಾಮದ ಯುವ ಸಾಫ್ಟ್ವೇರ್ ಇಂಜಿನಿಯರ್ ಶ್ವೇತಾ (25) ಅವರು ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿರುವ ದುಃಖದ ಘಟನೆ ನಡೆದಿದೆ.
ಏಪ್ರಿಲ್ 25ರಂದು ಸಂಜೆ ಮನೆಯಲ್ಲಿದ್ದಾಗ ಶ್ವೇತಾ ಹಠಾತ್ತಾಗಿ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೋಮಾಗೆ ಜಾರಿದ್ದರು. ವೈದ್ಯರು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿದೆ ಎಂದು ತಿಳಿಸಿದ್ದಾರೆ.
ಚಿಕಿತ್ಸೆ ವೇಳೆ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಪರಿಣಾಮ, ಶ್ವೇತಾ ಕೊನೆಯುಸಿರೆಳೆದಿದ್ದಾರೆ.ಮಗಳ ಸಾವಿನ ನಡುವೆಯೂ ಪೋಷಕರು ಅಂಗಾಂಗ ದಾನಕ್ಕೆ ಮುಂದಾಗಿದ್ದರೂ, ಆರೋಗ್ಯ ಸ್ಥಿತಿಯಿಂದ ಅದು ಸಾಧ್ಯವಾಗಲಿಲ್ಲ.ಮ್ಯಾಗ್ನಾ ಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಸಾವಿಗೆ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
For More Updates Join our WhatsApp Group :




