ಭಾರಿ ಮಳೆಗೆ ನಗರದಲ್ಲಿನ ಕೆಆರ್ ಸರ್ಕಲ್ ಅಂಡರ್ ಪಾಸ್ ಮತ್ತೆ ಜಲಾವೃತ.
ಬೆಂಗಳೂರು: ಬುಧವಾರ ಸುರಿದ ಭಾರಿ ಮಳೆಗೆ ನಗರದಲ್ಲಿನ ಕೆಆರ್ ಸರ್ಕಲ್ ಅಂಡರ್ ಪಾಸ್ ಮತ್ತೆ ಜಲಾವೃತಗೊಂಡಿದೆ. ನೀರು ತುಂಬಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.
ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಅಂಡರ್ ಪಾಸ್ನಲ್ಲಿ ಸುಮಾರು 10 ಅಡಿ ಮಟ್ಟದ ನೀರು ನಿಂತಿದೆ. ಬೆಳಗ್ಗೆಯಾದರೂ ನೀರು ಇಳಿಯದೇ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.2023ರ ಮೇ ತಿಂಗಳಲ್ಲಿ ಇದೇ ಅಂಡರ್ ಪಾಸ್ನಲ್ಲಿ ಕಾರು ಮುಳುಗಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿತ್ತು. ಆ ಘಟನೆಗೆ ಈಗಾಗಲೇ 3 ವರ್ಷಗಳಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಆತಂಕಕಾರಿಯಾಗಿದೆ.
ಅಂಡರ್ ಪಾಸ್ ವಿಧಾನಸೌಧ ಸಮೀಪದಲ್ಲಿದ್ದು, ಸಚಿವರು ಹಾಗೂ ಶಾಸಕರು ಪ್ರತಿನಿತ್ಯ ಸಂಚರಿಸುವ ಪ್ರಮುಖ ಮಾರ್ಗವಾಗಿದೆ. ಇಂತಹ ಪ್ರದೇಶದಲ್ಲೇ ನೀರು ಹರಿವಿಗೆ ಸೂಕ್ತ ವ್ಯವಸ್ಥೆಯ ಕೊರತೆ ಇದ್ದುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಂಡರ್ ಪಾಸ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪೀಕ್ ಅವರ್ನಲ್ಲಿ ಕೆಆರ್ ಸರ್ಕಲ್ ಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ.
For More Updates Join our WhatsApp Group :




