ಅಕ್ರಮ ಸಂಬಂಧ ಮುಚ್ಚಲು ನಾಟಕ; ತಾಯಿ-ಮಕ್ಕಳು ಸುರಕ್ಷಿತ ಎಂದು ಪೊಲೀಸರ ಸ್ಪಷ್ಟನೆ.!
ಬೆಂಗಳೂರು: ಮಗು ಮಾರಾಟದ ಪ್ರಕರಣವೆಂದು ಭಾರೀ ಸಂಚಲನ ಮೂಡಿಸಿದ್ದ ಘಟನೆಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಪತ್ನಿ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾಳೆ ಎಂದು ಪತಿ ರವಿಬಾಬು ನೀಡಿದ್ದ ದೂರು ಸುಳ್ಳು ಎಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ವಿವೇಕನಗರ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳು ಸುರಕ್ಷಿತವಾಗಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ, ಪತ್ನಿ ಮಗುವನ್ನು ಮಾರಾಟ ಮಾಡದೇ, ಪತಿಯ ದೈಹಿಕ ಮತ್ತು ಮಾನಸಿಕ ಕಿರುಕುಳದಿಂದ ಬೇಸತ್ತು ಮಕ್ಕಳೊಂದಿಗೆ ಮನೆ ಬಿಟ್ಟಿದ್ದಾಳೆ ಎಂಬುದು ತಿಳಿದುಬಂದಿದೆ.
ಪತಿ ರವಿಬಾಬುಗೆ ಇತರ ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿದ್ದು, ಅದನ್ನು ಪ್ರಶ್ನಿಸಿದ ಹಿನ್ನೆಲೆ ಗಲಾಟೆ ನಡೆದಿತ್ತು ಎಂದು ಪತ್ನಿ ಆರೋಪಿಸಿದ್ದಾರೆ. ತನ್ನ ತಪ್ಪು ಮುಚ್ಚಲು ಪತ್ನಿಯನ್ನು ಸಿಲುಕಿಸಲು ಸುಳ್ಳು ದೂರು ನೀಡಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಸ್ಪಷ್ಟವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
For More Updates Join our WhatsApp Group :




