ಬೆಳ್ಳಂದೂರು ಅಂಡರ್‌ಪಾಸ್‌ಗೆ ಹೊಸ ರೂಪ.!

ಬೆಳ್ಳಂದೂರು ಅಂಡರ್‌ಪಾಸ್‌ಗೆ ಹೊಸ ರೂಪ.!

ಸಿ.ಎಸ್.ಆರ್ ನಿಧಿಯಿಂದ ಸಾರ್ವಜನಿಕ ಸ್ನೇಹಿ ಸ್ಥಳವಾಗಿ ಅಭಿವೃದ್ಧಿ.

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು ಫ್ಲೈಓವರ್ ಕೆಳಭಾಗದ ಅನುಪಯುಕ್ತ ಸ್ಥಳವನ್ನು ಸಿ.ಎಸ್.ಆರ್ ನಿಧಿಯಿಂದ ಸುಂದರ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯನ್ನು ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಉದ್ಘಾಟಿಸಿದರು.

ಬೆಳ್ಳಂದೂರು ಜಂಕ್ಷನ್, ಬೆಂಗಳೂರು ಐಟಿ ಕಾರಿಡಾರ್‌ನ ಹೃದಯ ಭಾಗವಾದ ಔಟರ್ ರಿಂಗ್ ರೋಡ್‌ನಲ್ಲಿ ಇರುವ ಪ್ರಮುಖ ಮತ್ತು ಹೆಚ್ಚಿನ ಸಾಂದ್ರತೆಯ ಕೇಂದ್ರವಾಗಿದ್ದು, ಈ ಅಭಿವೃದ್ಧಿಯು ಪಾದಚಾರಿಗಳ ಸುರಕ್ಷತೆ, ಸೌಂದರ್ಯ ವೃದ್ಧಿ ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳನ್ನು ಸೃಷ್ಟಿಸುವುದನ್ನು ಉದ್ದೇಶವನ್ನು ಹೊಂದಿದೆ.

ಈ ಅಭಿವೃದ್ಧಿಯು ನಗರ ಪಾಲಿಕೆಯ ಪಾದಚಾರಿಗಳಿಗೆ ಮೊದಲ ಆದ್ಯತೆ ತತ್ವದ ಅನ್ವಯವಾಗಿ ರೂಪುಗೊಂಡಿದ್ದು, ಸಾರ್ವಜನಿಕರಿಗೆ ವಿಶ್ರಾಂತಿ ಸ್ಥಳಗಳು, ಹಸಿರು ಪ್ರದೇಶಗಳು ಮತ್ತು ಪಾದಚಾರಿಗಳಿಗಾಗಿ ದೊಡ್ಡ ಪ್ರಮಾಣದ ಫುಟ್‌ಪಾತ್ ಸ್ಥಳವನ್ನು ಮರುಪಡೆಯುವ ಮೂಲಕ ಯೋಜನೆ ಸಾಕಾರಗೊಂಡಿದೆ.

ಯೋಜನೆಯ ಮುಖ್ಯ ಉದ್ದೇಶಗಳು

• ಸಾರ್ವಜನಿಕ ಸ್ಥಳಗಳನ್ನು ಸುಂದರಗೊಳಿಸುವುದು.

• ನಾಗರಿಕರಿಗೆ ಸ್ವಚ್ಛ ಹಾಗೂ ಸುರಕ್ಷಿತ ಪರಿಸರ ಒದಗಿಸುವುದು.

• ಅನುಪಯುಕ್ತ ಸ್ಥಳಗಳನ್ನು ಸಮುದಾಯ ಸ್ನೇಹಿ ಸ್ಥಳಗಳಾಗಿ ಪರಿವರ್ತಿಸುವುದು.

ಪ್ರಮುಖ ವಿಶೇಷತೆಗಳು:

ಅಂಡರ್‌ಪಾಸ್ ಪ್ರದೇಶದಲ್ಲಿ ಕಲಾತ್ಮಕ ಅಲಂಕಾರ ಮತ್ತು ಗೋಡೆ ಚಿತ್ರಗಳನ್ನು ರಚಿಸಲಾಗಿದೆ.

• ಸ್ವಚ್ಛತೆ ಮತ್ತು ನಿರ್ವಹಣೆಯೊಂದಿಗೆ ಆಕರ್ಷಕ ವಾತಾವರಣ ನಿರ್ಮಾಣ ಮಾಡಲಾಗಿದೆ.

• ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಶ್ರಾಂತಿ ವಲಯವನ್ನು ಅಭಿವೃದ್ಧಿ ಪಡಿಸಲಾಗಿದೆ.

• ಸುರಕ್ಷತೆ ಮತ್ತು ಪರಿಸರ ಸ್ನೇಹಿ ಅಂಶಗಳ ಒಳಗೊಂಡ ವಿನ್ಯಾಸವನ್ನು ಅಳವಡಿಸಿಕೊಳ್ಳಲಾಗಿದೆ.

*ಸಿ.ಎಸ್.ಆರ್ ಸಹಕಾರದ ಮಹತ್ವ*

ಬೆಳ್ಳಂದೂರು ಫ್ಲೈಓವರ್ ಅಂಡರ್‌ಪಾಸ್ ಸುಂದರೀಕರಣ ಯೋಜನೆಯು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಉತ್ತಮ ಉದಾಹರಣೆ ಆಗಿದ್ದು, ನಗರಾಭಿವೃದ್ಧಿಯಲ್ಲಿ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳಿಕೆಯನ್ನು ಉತ್ತೇಜಿಸುವತ್ತ ಮಹತ್ವದ ಹೆಜ್ಜೆಯಾಗಿದೆ..

ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಟೆಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು, ಇಂಡಿಯಾ ರೈಸಿಂಗ್ ಟ್ರಸ್ಟ್ ಪ್ರತಿನಿಧಿಗಳು, ಸಹಾಯಕ ಪ್ರಧಾನ ವ್ಯವಸ್ಥಾಪಕರು (ಬಿ.ಎಸ್.ಡಬ್ಲ್ಯೂ.ಎಂ.ಎಲ್) ಹಾಗೂ ಪೌರಕಾರ್ಮಿಕರು  ಇನ್ನಿತರರು ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *