ಕಾವೇರಿ 5ನೇ ಹಂತದ ಬಳಕೆದಾರರ ಶುಲ್ಕ 50% ಕಡಿತಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ..

ಕಾವೇರಿ 5ನೇ ಹಂತದ ಬಳಕೆದಾರರ ಶುಲ್ಕ 50% ಕಡಿತಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ..

‘ದುಬಾರಿ ನೀರಿನ ಸಂಪರ್ಕಕ್ಕೆ ಜನ ಬೆನ್ನು ತಿರುಗಿಸಿದ್ದಾರೆ’; ಜಲಮಂಡಳಿಗೆ ಎಎಪಿ ಟೀಕೆ..

ಬೆಂಗಳೂರು: ನಗರದ ಹೊರವಲಯದಲ್ಲಿರುವ 110 ಹಳ್ಳಿಗಳ  2.5 ಲಕ್ಷ ಮನೆಗಳಿಗೆ ಕುಡಿಯುವ ಇದನ್ನು ಪೂರೈಸುವ  ಕಾವೇರಿ 5ನೇ ಹಂತದ  ಯೋಜನೆಯು ನಾಗರಿಕರಿಗೆ ನೀರನ್ನು ತಲುಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೂಡಲೇ  ಬೆಂಗಳೂರು ಜಲ ಮಂಡಳಿ ವಿಧಿಸುತ್ತಿರುವ ಬಳಕೆದಾರರ ಶುಲ್ಕ ಅತ್ಯಂತ ದುಬಾರಿಯಾಗಿದ್ದು  ಇದರಲ್ಲಿ 50 %  ರಿಯಾಯಿತಿಯನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷ ಎಂದು ಆಗ್ರಹಿಸಿತು.

ಈ ಬಗ್ಗೆ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.  ಸತೀಶ್ ಕುಮಾರ್  ”  ಈ ಯೋಜನೆಗೆ ಈಗಾಗಲೇ  5500 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.  ಯೋಜನೆ ಮುಗಿದು  2 ವರ್ಷಗಳಾಗುತ್ತಾ ಬರುತ್ತಿದೆ.  ಆದರೆ ಸಾರ್ವಜನಿಕರು ಜಲಮಂಡಳಿಯ ಅತ್ಯಂತ ದುಬಾರಿ ಬಳಕೆದಾರರ ಶುಲ್ಕವನ್ನು ಭರಿಸಲಾಗದೆ ಸಂಪರ್ಕಗಳನ್ನು ತೆಗೆದುಕೊಳ್ಳುತ್ತಿಲ್ಲ. ಸರ್ಕಾರವು ಒಂದು ಕಡೆ  ಕುಡಿಯುವ ನೀರಿನ ಯೋಜನೆಗೆ ವಿದೇಶಗಳಿಂದ ಸಾಲ ಮಾಡಿದ್ದಾರೆ. ಸಾಲವನ್ನು ತೀರಿಸಬೇಕೆಂಬ ನೆಪದಲ್ಲಿ  ಮತ್ತೊಂದು ಕಡೆ ನಾಗರಿಕರಿಂದ  ಕೋಟ್ಯಾಂತರ ರೂಪಾಯಿಗಳನ್ನು ಕೊಳ್ಳೆಹೊಡೆಯುವ  ಹುನ್ನಾರ ದಲ್ಲಿ  ತೊಡಗಿದ್ದಾರೆ “

” ಕೂಡಲೇ ಸರ್ಕಾರವು ಕೊನೆಯ ಹಂತದ ಮನೆ ಮನೆಗಳಿಗೆ ನೀರನ್ನು ತಲುಪಿಸುವ ಪೈಪ್ ಲೈನ್ ಕಾಮಗಾರಿಗಳನ್ನು ಮುಗಿಸಬೇಕು  ಹಾಗೂ 8 ರಿಂದ 10 ಕಂತುಗಳಲ್ಲಿ  ರಿಯಾಯಿತಿ ನೀಡಿರುವ ಬಳಕೆದಾರರ ಶುಲ್ಕವನ್ನು ತೆಗೆದುಕೊಳ್ಳಬೇಕು. ಈ ರೀತಿಯ ಕ್ರಮಗಳನ್ನು  ತೆಗೆದುಕೊಂಡರೆ ಸಾರ್ವಜನಿಕರು ಸಹ ಮುಂದೆ ಬಂದು ಈ ಯೋಜನೆಯ ಸದ್ಬಳಕೆಯನ್ನು ಮಾಡಿಕೊಳ್ಳುತ್ತಾರೆ. ಕೂಡಲೇ ಮುಖ್ಯಮಂತ್ರಿಗಳು ವಿಶೇಷ ಸಭೆಯನ್ನು ಕರೆದು ನಿರ್ಣಯಗಳನ್ನು ತೆಗೆದುಕೊಳ್ಳಬೇಕು ”  ಎಂದು ಸತೀಶ್ ಕುಮಾರ್ ಆಗ್ರಹಿಸಿದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *