ಅಯೋಧ್ಯ: ದೀಪಾವಳಿಯನ್ನು ಇಡೀ ದೇಶಾದ್ಯಂತ ಆಚರಣೆ ಮಾಡುತ್ತಿದ್ದು ಅಯೋಗ್ಯಯಲ್ಲಿ ದೀಪೋತ್ಸವದ ಸಂಭ್ರಮ ಮುಗಿಲುಮುಟ್ಟಿದೆ ಈ ಹಿನ್ನೆಲೆ ಗಿನ್ನಿಸ್ ದಾಖಲೆ ನಿರ್ಮಿಸುವುದಕ್ಕೆ ಸಜ್ಜು ಮಾಡಲಾಗಿದೆ. ಶ್ರೀರಾಮ ರಾವಣಸುರನ ಸಂಹಾರ ಮಾಡಿದ ನಂತರ ಆಂಜನೇಯ ಸೀತೆ ಲಕ್ಷ್ಮಣನ ಸಮೇತ ಅಯೋಧ್ಯೆಗೆ ಹಿಂದಿರುಗಿದ್ದು ಇದೇ ದೀಪಾವಳಿ ಸಂದರ್ಭದಲ್ಲಿ ಎಂಬುದು ತಿಳಿದ ಸಂಗತಿ. ಈಗ ನೂತನ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು ದೀಪೋತ್ಸವ ಅದ್ದೂರಿಯಾಗಿ ನಡೆಯುತ್ತದೆ ಈ ಬಾರಿ ಲಕ್ಷಾಂತರ ದೀಪಗಳನ್ನು ಸರಯು ನದಿ ತಟದಲ್ಲಿ ಹಚ್ಚಲಿದ್ದು ಗಿನ್ನಿಸ್ ದಾಖಲೆ ಸೇರುತ್ತಿರುವುದು ವಿಶೇಷವಾಗಿದೆ.
ಅಯೋಧ್ಯೆ ದೀಪೋತ್ಸವ: ಗಿನ್ನಿಸ್ ದಾಖಲೆ ನಿರ್ಮಿಸಲು ರೆಡಿ.
