ಸಹಕಾರ ಇಲಾಖೆ ರೈತರ ಬೆಳವಣಿಗೆಗೆ ಶಕ್ತಿ ಕೇಂದ್ರ: CM

ಸಹಕಾರ ಇಲಾಖೆ ರೈತರ ಬೆಳವಣಿಗೆಗೆ ಶಕ್ತಿ ಕೇಂದ್ರ: CM

ಸಹಕಾರ ಸಮೃದ್ಧಿ ಸೌಧ ಲೋಕಾರ್ಪಣೆ: ಗ್ರಾಮೀಣ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಮಹತ್ವ ಒತ್ತಿಹೇಳಿದ ಸಿಎಂ

ಬೆಂಗಳೂರು:  ಯಾವ ಕ್ಷೇತ್ರವೂ  ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು “ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ ‘ಸಹಕಾರ ಸಮೃದ್ಧಿ ಸೌಧ’ವನ್ನು” ಲೋಕಾರ್ಪಣೆಗೊಳಿಸಿ ಮಾತನಾಡಿದರು.2023 ರಲ್ಲಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ತಾವೇ ನೆರವೇರಿಸಿದ್ದು, ಮೂರು ವರ್ಷಗಳಲ್ಲಿ 19.43 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎನ್ನುವುದು ಸಂತಸದ ವಿಚಾರ ಎಂದರು. 

 ನೆಹರೂ ಅವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಒಂದು ಶಾಲೆ,ಪಂಚಾಯತಿ ಮತ್ತು ಸಹಕಾರ ಸಂಘ ಇರಲೇಬೇಕು. ಆಗ ಮಾತ್ರ ಆ ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದಿದ್ದರು. ಪ್ರಸ್ತುತ ಹಾಲಿನ ಸೊಸೈಟಿಗಳಾದ ನಂತರ  ಪ್ರತಿ ಊರಿನಲ್ಲಿ ಇದು ಸಾಧ್ಯವಾಗಿದೆ ಎಂದರು.ಹಿಂದೆ  ತಾವು ಸಹಕಾರ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳನ್ನು ಹಾಲು  ಡೈರಿಯೊಂದಿಗೆ  ಸೇರ್ಪಡೆ ಮಾಡಲಾಯಿತು. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಲು ಸಾಧ್ಯವಾಯಿತು ಎಂದರು.

ಸಹಕಾರ ಸೌಧದಲ್ಲಿ ಸೇವೆ ಉತ್ತಮವಾಗಿರಲಿ ಎಂದು ಸಿಎಂ ಸೂಚಿಸಿದರು.

ಉಪಮುಖ್ಯಮಂತ್ರಿ ಡಿ. ಕೆ.  ಶಿವಕುಮಾರ್, ಸಚಿವರಾದ ಹೆಚ್ ಕೆ ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯೆ ಶ್ರೀಮತಿ ಬಿಲ್ಕಿಸ್ ಬಾನು, ಸಹಕಾರ ಇಲಾಖೆ ಕಾರ್ಯದರ್ಶಿಗಳು, ಇಲಾಖೆಯ ನಿಬಂಧಕರಾದ   ಕಾಂತರಾಜು, ಮೊದಲಾದವರು ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *