ದಿನಾಂಕ : 04.10.2024
ವಾರ: ಶುಕ್ರವಾರ
ನಕ್ಷತ್ರ : ಚಿತ್ತಾ
ತಿಥಿ : ದ್ವಿತೀಯ
ಇಂದಿನ ವಿಶೇಷ : ಚಂದ್ರ ದರ್ಶನ
ಅದೃಷ್ಟ ಸಂಖ್ಯೆ : 1
ಇಂದಿನ ನಿಮ್ಮ ಭವಿಷ್ಯ ವಾಣಿ
ಮೇಷ: ಬಸ್ ಮಾಲೀಕರಿಗೆ ಧನಲಾಭವಿದೆ. ಅಡಕೆ ಕೃಷಿಯಲ್ಲಿ ಯಶಸ್ಸು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಅಭ್ಯಾಗತರ ಆಗಮನ.
ವೃಷಭ: ಚಂಚಲ ಮನಸ್ಸು. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯಾಗಲಿದೆ. ಮಿತ್ರರಲ್ಲಿ ದ್ವೇಷ ಉಂಟಾಗ ಬಹುದು. ಸುಖ ಭೋಜನ ಪ್ರಾಪ್ತಿ.
ಮಿಥುನ: ಆತ್ಮೀಯರಲ್ಲಿ ಹಗೆತನ ಬೇಡ. ಆಹಾರಧಾನ್ಯಗಳ ಮಳಿಗೆ ವ್ಯವಹಾರ ಸಮಾಧಾನಕರ. ಸಲ್ಲದ ಅಪವಾದಕ್ಕೆ ತಲೆಕೆಡಿಸಿಕೊಳ್ಳಬೇಡಿ.
ಕಟಕ: ಹೊಸ ಉದ್ಯೋಗ ಪ್ರಾಪ್ತಿ. ಪರ ಸ್ತ್ರೀಯರಿಂದ ತೊಂದರೆ. ಅನಿರೀಕ್ಷಿತ ದ್ರವ್ಯಲಾಭವಾಗುವುದು. ಮಾತಿನಿಂದ ಅನರ್ಥ.
ಸಿಂಹ: ಸಂಗಾತಿಯೊAದಿಗೆ ಮನಸ್ತಾಪ. ನೆಮ್ಮದಿ ಇಲ್ಲದ ಜೀವನ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಆರೋಗ್ಯದಲ್ಲಿ ಚೇತರಿಕೆ.
ಕನ್ಯಾ: ಬಾಕಿ ವಸೂಲಿಯಾಗುವುದು. ದೂರ ಪ್ರಯಾಣ ಸಾಧ್ಯತೆ. ಇಷ್ಟವಾದ ವಸ್ತುಗಳ ಖರೀದಿ. ವಾದ-ವಿವಾದಗಳಲ್ಲಿ ಸೋಲು.
ತುಲಾ: ಹೈನೋದ್ಯಮದಲ್ಲಿ ಲಾಭ ಬರಲಿದೆ. ಆತ್ಮೀಯರಲ್ಲಿ ವಿರಸ. ಏಕಾಂತ ವಾಸ. ಮನಸ್ಸಿನಲ್ಲಿ ಕೆಟ್ಟ ಆಲೋಚನೆ ಬರಬಹುದು.
ವೃಶ್ಚಿಕ: ಸ್ತ್ರೀಯರಿಂದ ಲಾಭ. ವ್ಯವಹಾರದಲ್ಲಿ ಅಲ್ಪ ಆದಾಯ. ಪ್ರಯಾಣದಿಂದ ಅನಾರೋಗ್ಯ ಕಾಡೀತು. ಆದಾಯಕ್ಕಿಂತ ಹೆಚ್ಚು ಖರ್ಚು.
ಧನಸ್ಸು: ಆಸ್ತಿ ವಿಚಾರವಾಗಿ ವೈಮನಸ್ಸು. ಆತ್ಮೀಯರನ್ನು ದ್ವೇಷಿಸುವಿರಿ. ರೇಷ್ಮೆ ಕೃಷಿಕರಿಗೆ ಅಧಿಕ ಹಣ ಪ್ರಾಪ್ತಿಯಾಗಿ ಸಮಾಧಾನ.
ಮಕರ: ಆಕಸ್ಮಿಕ ಆಪತ್ತಿನಿಂದ ಪಾರಾಗುವಿರಿ. ದಂಡ ಕಟ್ಟುವ ಸಾಧ್ಯತೆ. ಹಿತಶತ್ರುಗಳಿಂದ ತೊಂದರೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಕುಂಭ: ಕುಟುಂಬದಲ್ಲಿ ಅಹಿತಕರ ವಾತಾವರಣ. ಸ್ತ್ರೀಯರಿಂದ ನೆಮ್ಮದಿ. ಪರರಿಂದ ಮೋಸವಾದೀತು. ಸ್ಥಿರಾಸ್ತಿ ಮಾರಾಟ. ಶತ್ರು ಬಾಧೆ.
ಮೀನ: ದಾನ ಧರ್ಮದಲ್ಲಿ ಆಸಕ್ತಿ. ನೆಮ್ಮದಿ. ಮಾತಿನ ಚಕಮಕಿ. ತಂದೆಯ ಆರೋಗ್ಯದಲ್ಲಿ ಏರುಪೇರು. ದಾಂಪತ್ಯದಲ್ಲಿ ಅನ್ನೋನ್ಯತೆ.