ವ್ಯರ್ಥವಾಗಿ ಮಾತನಾಡುವುದು ಬೇಡ : ಡಾ.ಅಶೋಕ . D
ತಿಪಟೂರು: ನಮ್ಮ ಮಾತಗಳು ಗೋಡೆಗಳಿಗೆ ಹೊಡೆದ ಮೊಳೆಯಂತಿರಬೇಕು. ಹೊಡೆದ ಮೊಳೆ ಕಿತ್ತರು ಮಾಸದಂತಿರಬೇಕು. ನಮ್ಮ ಮಾತು ನೆನಪಿಸುವಂತಿರಬೇಕು, ಶಪಿಸುವಂತಿರಬಾರದು. ಯುವಕರು ವ್ಯರ್ಥವಾಗಿ ಮಾತನಾಡುವುದು ಬೇಡವೆಂದು ತಾಲ್ಲೋಕು ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಡಾ. ಅಶೋಕ ಕರೆ ನೀಡಿದರು.
ಶ್ರೀಮದ್ ರಂಭಾಪುರಿ ಮಠದ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ರಾಷ್ಟಿçÃಯ ಸೇವಾ ಯೋಜನೆಯ ಮೂರನೇ ದಿನದ ಡಾ. ಬಿ.ಆರ್. ಅಂಬೇಡ್ಕರ್ ವೇದಿಕೆಯ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ‘ಸಂವಿಧಾನ ಅರಿಯುವಲ್ಲಿ ಯುವಕರ ಪಾತ್ರ’ ವಿಷಯ ಕುರಿತು ಮಾತನಾಡುತ್ತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರೀಕನಿಗೂ ಮಾರ್ಗದರ್ಶನವಾಗಿದೆ. ಸಂವಿಧಾನವು ಹೇಳುವ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ಮೌಲ್ಯಗಳು ಮಹತ್ವವಾದವುಗಳು. ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲಿ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದು ತಿಳಿಸಿದರು.
ವಕೀಲ ವರುಣ್ ಕುಮಾರ್ ಮಾತನಾಡಿ ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯಗಳಿಗೆ ಬದ್ಧರಾಗಿರಬೇಕು. ನಾವು ಬಂದAತಹ ನೆಲೆಗಳನ್ನು ಮರೆಯಬಾರದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಅಧ್ಯಕ್ಷರಾದ ಕೆ.ಎಸ್. ಸದಾಶಿವಯ್ಯ ಮಾತನಾಡಿ ರಾಷ್ಟಿçÃಯ ಸೇವಾ ಯೋಜನೆಯಲ್ಲಿ ಭಾಗಿಯಾದ ಪ್ರತಿಯೊಬ್ಬ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮವಾದ ಸ್ಥಾನಗಳನ್ನು ಪಡೆಯುವುದರ ಮೂಲಕ ಕಾಲೇಜಿನಲ್ಲಿ ನಿಮ್ಮ ಮನೆಗೆ ಕೀರ್ತಿ ತರುವ ಶಿಬಿರಾರ್ಥಿಗಳಾಗಿ ಎಂದರು.ಶಿಬಿರಾಧಿಕಾರಿಗಳಾದ ಮೋಹನ ಕುಮಾರ ಎಚ್.ಆರ್, ಸ್ಮಿತಾ ಹೆಚ್.ಎಸ್, ಭಾರತಿ ವೈ.ಕೆ ಮತ್ತು ಡಾ.ವೆಂಕಟೇಶ್ ಎಲ್. ಎಂ ಹಾಜರಿದ್ದರು.
For More Updates Join our WhatsApp Group :




