ಮಗಳ ಹಿಂದೆ ಬಿದ್ದ ಯುವಕನ ಹ*, ನಾಲ್ವರು ಬಂಧನ.!

ಮಗಳ ಹಿಂದೆ ಬಿದ್ದ ಯುವಕನ ಹ*, ನಾಲ್ವರು ಬಂಧನ.!

ಪ್ರೀತಿಯ ಹೆಸರಿನಲ್ಲಿ ಕಿರುಕುಳ – ಕೊ*ಗೆ ಕಾರಣ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪ್ರಾಪ್ತ ಯುವತಿಯನ್ನು ಕಾಡುತ್ತಿದ್ದ ಯುವಕನನ್ನು ಆಕೆಯ ತಂದೆ ಮತ್ತು ಸಂಬಂಧಿಕರು ಸೇರಿ ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.ಬಾಗಲಕೋಟೆ ಮೂಲದ ರಮೇಶ್ ಎಂಬಾತನೇ ಕೊಲೆಯಾದ ವ್ಯಕ್ತಿ. ಈ ಸಂಬಂಧ ಯಲಹಂಕ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಅಪ್ರಾಪ್ತ ಯುವತಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದ ರಮೇಶ್ ವಿರುದ್ಧ ಈಗಾಗಲೇ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಜೈಲಿನಿಂದ ಬಂದ ಬಳಿಕವೂ ಕಿರುಕುಳ ಮುಂದುವರಿಸಿದ್ದನು.ತಂದೆ ಈರಯ್ಯ ಮತ್ತು ಸಂಬಂಧಿಕರು ರಮೇಶ್ ಅನ್ನು ಊಟಕ್ಕೆ ಕರೆದು, ಮದ್ಯಪಾನ ಮಾಡಿಸಿ ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಕೊಲೆ ಬಳಿಕ ಶವವನ್ನು ಯಲಹಂಕದ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ನಂತರ ಪೊಲೀಸರು ಶವ ಪತ್ತೆ ಹಚ್ಚಿದರು.ಸಿಸಿಟಿವಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ಭೇದಿಸಿ ನಾಲ್ವರನ್ನು ಬಂಧಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *