ಬೆಂಗಳೂರು ಉತ್ತರ ನಗರ ಪಾಲಿಕೆಯ ಹೊಸ ಕ್ರಮ.
ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ಹಾಗೂ C40 ಸಂಸ್ಥೆಗಳ ಸಹಯೋಗದಲ್ಲಿ, ನಗರದ ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಹೀಟ್–ಹೆಲ್ತ್ ಪ್ರೋಟೋಕಾಲ್ ಜಾರಿಗೆ ತರಲಾಗುತ್ತಿದೆ.
ಈ ಸಂಬಂಧ, ಯಲಹಂಕ ನ್ಯೂಟೌನ್‌ನ ಅಂಬೇಡ್ಕರ್ ಭವನದಲ್ಲಿ ಇಂದು *ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್* ರವರ ಅಧ್ಯಕ್ಷತೆಯಲ್ಲಿ ತರಬೇತಿ ಹಾಗೂ ಕೂಲಿಂಗ್ ಕಿಟ್ (ಟೆಂಪರೇಚರ್ ಮತ್ತು ಹುಮಿಡಿಟಿ ಚೆಕ್ಕರ್, ನೆಕ್ ಕಾಲರ್ ಫ್ಯಾನ್, ನೀರು ಕುಡಿಯಲು ಬಾಟಲ್, ಟೋಪಿ, ಹ್ಯಾಂಡ್ ಸ್ಲೀವ್ಸ್) ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು, ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ (DWCC) ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಬಿಸಿಲಿನ ಪರಿಣಾಮಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
ಪೈಲಟ್ ಹಂತದಲ್ಲಿ ನಾಗವಾರ (ವಾರ್ಡ್ 23) ಮತ್ತು ಎಚ್‌ಬಿಆರ್ (ವಾರ್ಡ್ 24) ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಕೂಲಿಂಗ್ ಕಿಟ್‌ಗಳನ್ನು ವಿತರಿಸಲಾಯಿತು.
*ತರಬೇತಿ ಚಟುವಟಿಕೆಗಳು*
ತರಬೇತಿ ಕಾರ್ಯಕ್ರಮದಲ್ಲಿ ಬಿಸಿಲಿನ ಆರೋಗ್ಯದ ಮೇಲೆ ಬೀರುವ ಪರಿಣಾಮ, ತಾಪಮಾನ ಅಂದಾಜು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಈ ವೇಳೆ ಜಂಟಿ ಆಯುಕ್ತರಾದ ಪಲ್ಲವಿ ಮತ್ತು ಮೊಹಮ್ಮದ್ ನಯೀಮ್ ಮೊಮಿನ್, ಆರೋಗ್ಯಾಧಿಕಾರಿಯಾದ ಸಿದ್ದಪ್ಪಾಜಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಸಿಬ್ಬಂದಿಗಳು ಹಾಜರಿದ್ದರು.
For More Updates Join our WhatsApp Group :




