ಉಗುರ ಕತ್ತರಿಸಿದ ಪ್ರಯಾಣಿಕನಿಗೆ ಚಾಲಕ ಪಾಠ
ಬೆಂಗಳೂರು: ಆಟೋದಲ್ಲಿ ಪ್ರಯಾಣಿಕರೊಬ್ಬರು ಗಲೀಜು ಮಾಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ. ಪ್ರಯಾಣಿಕನನ್ನು ವಾಪಸ್ ಕರೆದು, ಅವರಿಂದಲೇ ಆಟೋವನ್ನು ಕ್ಲೀನ್ ಮಾಡಿಸಿದ್ದಾರೆ.
ಮಹಾನಗರಗಳಲ್ಲಿ ಯಾರ ಬಳಿಯೂ ಸಮಯ ಇರಲ್ಲ. ಅದರಲ್ಲೂ ಪೀಕ್ ಅವರ್ನಲ್ಲಿ ಕೆಲಸಕ್ಕೆ ಹೋಗಬೇಕಾದ್ರೆ ಕನಿಷ್ಠ 30 ನಿಮಿಷವನ್ನು ಬೆಂಗಳೂರು ಟ್ರಾಫಿಕ್ ಕಬಳಿಸುತ್ತದೆ. ಹಾಗಾಗಿ ಬೆಂಗಳೂರಿನ ಜನರು ಮಾರ್ಗಮಧ್ಯೆಯೇ ತಿಂಡಿ ತಿನ್ನೋದು, ಕೂದಲು ಸರಿ ಮಾಡಿಕೊಳ್ಳುವುದನ್ನು ಮಾಡುತ್ತಿರುತ್ತಾರೆ. ಆಟೋದಲ್ಲಿ ಪ್ರಯಾಣಿಕರೊಬ್ಬರು ಉಗರು ಕತ್ತರಿಸಿಕೊಂಡಿದ್ದಕ್ಕೆ ಚಾಲಕ ಗರಂ ಆಗಿದ್ದಾರೆ.
ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಗ್ರಾಹಕರು ಇಳಿದು ಹೋಗ್ತಿದ್ದಂತೆ ಚಾಲಕ ಹಿಂದಿನ ಸೀಟ್ ನೋಡುತ್ತಾರೆ. ಕೂಡಲೇ ಗ್ರಾಹಕರನ್ನು ಕರೆದು ಕ್ಲೀನ್ ಮಾಡುವಂತೆ ಹೇಳುತ್ತಾರೆ. ಗ್ರಾಹಕ ಮರು ಮಾತನಾಡದೇ ಕ್ಲೀನ್ ಮಾಡಿ ಅಲ್ಲಿಂದ ತೆರಳುತ್ತಾರೆ. ನಂತರ ಚಾಲಕ ಆಗಿದ್ದೇನು ಎಂಬುದನ್ನು ವಿವರಿಸುತ್ತಾರೆ.
ಮಕ್ಕಳು ಸೇರಿದಂತೆ ಎಲ್ಲಾ ಜನರು ಟ್ರಾವೆಲ್ ಮಾಡ್ತಾರೆ ಅಂತ ಬೆಳಗ್ಗೆಯೇ ಆಟೋ ಕ್ಲೀನ್ ಮಾಡಿಕೊಂಡು ಬಂದಿರುತ್ತೇವೆ. ಉಗುರ ಕಟ್ ಮಾಡಿ ಎಲ್ಲಾ ಸೀಟ್ ಮೇಲೆ, ಕೆಳಗಡೆ ಹಾಕಿದ್ದಾರೆ. ಪ್ರಯಾಣ ಮಾಡುವಾಗ ಕಾಮನ್ಸೆನ್ಸ್ ಇರಬೇಕು. ಆಟೋ ಕ್ಲೀನ್ ಮಾಡಿಕೊಂಡು ಬರೋದು ನಿಮಗಾಗಿ. ಹಾಗಾಗಿ ಗ್ರಾಹಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ.
For More Updates Join our WhatsApp Group :



