ಮೂಲಸೌಕರ್ಯ ಬಲಪಡಿಸಲು ಪಾಲಿಕೆಯ ಹೊಸ ಹೆಜ್ಜೆ.
ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವ ಮತ್ತು ನಾಗರಿಕ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ, ಪಾಲಿಕೆಯ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ಅವರ ನೇತೃತ್ವದಲ್ಲಿ ಇಂದು ನಗರದ ಪ್ರಮುಖ ತಜ್ಞರೊಂದಿಗೆ ವಿಶೇಷ ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಪಾಲಿಕೆಯ ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ನಗರ ಅಭಿವೃದ್ಧಿಗಾಗಿ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ತಜ್ಞರ ಸಲಹಾ ಸಮಿತಿ ಅವಶ್ಯವಿದ್ದು ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವವರನ್ನು ಈ ಸಭೆಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ ತಜ್ಞರು
ಶ್ರೀ ಪಾರ್ಥಸಾರಥಿ: ಮಾಹಿತಿ ತಂತ್ರಜ್ಞಾನ ತಜ್ಞ
ಶ್ರೀ ಅಶ್ವಿನ್ ಮಹೇಶ್: ನಗರ ವಿನ್ಯಾಸ ಮತ್ತು ಸಂಚಾರ ತಜ್ಞ
ಶ್ರೀಮತಿ ಪದ್ಮಶ್ರೀ: ಘನತ್ಯಾಜ್ಯ ನಿರ್ವಹಣಾ (SWM) ತಜ್ಞೆ
ಡಾ. ಶಾಂತಿ: ಎಚ್.ಎಸ್.ಆರ್ (HSR) ಬಡಾವಣೆ ನಾಗರಿಕ ವೇದಿಕೆ
ಶ್ರೀ ಪ್ರಸನ್ನ ರಾವ್: ನಗರ ವಿನ್ಯಾಸ ಮತ್ತು ವಾಸ್ತುಶಿಲ್ಪ ತಜ್ಞ
*ತಜ್ಞರ ಸಲಹೆಗಳು ಹಾಗೂ ಪರಿಹಾರೋಪಾಯಗಳು* ಸಭೆಯಲ್ಲಿ ಭಾಗವಹಿಸಿದ ತಜ್ಞರು ನಗರದ ಪ್ರಮುಖ ಸಮಸ್ಯೆಗಳಿಗೆ ಈ ಕೆಳಗಿನ ಪರಿಹಾರಗಳನ್ನು ಸೂಚಿಸಿದರು.
*ರಚನಾತ್ಮಕ ಕಾರ್ಯವಿಧಾನ:* ನಗರ ನಿರ್ವಹಣೆಗೆ ಒಂದು ವ್ಯವಸ್ಥಿತವಾದ ಪ್ರಕ್ರಿಯೆ ಮತ್ತು ದಕ್ಷ ಸಂವಹನ ವ್ಯವಸ್ಥೆಯನ್ನು ರೂಪಿಸುವುದು.
*ದತ್ತಾಂಶ ಆಧಾರಿತ ಯೋಜನೆ:* ರಸ್ತೆಗಳು, ಕೆರೆಗಳು, ಉದ್ಯಾನವನಗಳು, ಒಳಚರಂಡಿ ಮತ್ತು ವಾಣಿಜ್ಯ ಮಳಿಗೆಗಳ ಸಮಗ್ರ ದತ್ತಾಂಶ (Data) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು.
ಈ ವೇಳೆ ಪಾಲಿಕೆಯ ಅಪರ ಆಯುಕ್ತರಾದ ಶ್ರೀ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಶ್ರೀ ಬಸವರಾಜ ಕಬಾಡೆ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
For More Updates Join our WhatsApp Group :




