ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಬಂಧನ – ಯುವಕರಿಂದ ಠಾಣೆ ಮುಂದೆ ಸಂಭ್ರಮಾಚರಣೆ
ಬಾಗಲಕೋಟೆ: ಇಸ್ಪೀಟ್ ಆಡುವವರ ಬಳಿ ಲಂಚ ಸ್ವೀಕರಿಸುವಾಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭೀಮಪ್ಪ ರಬಕವಿ ಹಾಗೂ ಕಾನ್ಸ್ಟೇಬಲ್ ಸಂತೋಷ್ ಬಿರಾದಾರ ಎನ್ನುವರು ಮುತ್ತಪ್ಪ ನಾಯ್ಕರ್ ಎಂಬುವರಿಂದ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಯುವಕ ಗುಂಪು ಕೆರೂರು ಪೊಲೀಸ್ ಠಾಣೆ ಮುಂದೆಯೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದೆ.
ಇಸ್ಪೀಟ್ ಆಡುತ್ತಿದ್ದ ಓರ್ವ ಆರೋಪಿ ರಕ್ಷಣೆಗೆ ಮುಂದಾಗಿದ್ದ ಪೊಲೀಸರು, ಬೈಕ್ ಬಿಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮುತ್ತಪ್ಪ ನಾಯ್ಕರ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಅನ್ವಯ ಲೋಕಾಯುಕ್ತ SP ಮಹಾಲಿಂಗ ನಂದಗಾಂವಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿ, ಪಿಎಸ್ಐ ಭೀಮಪ್ಪ, ಪಿಸಿ ಬಿರಾದಾರನನ್ನು 1.70 ಲಕ್ಷ ಲಂಚ ಸ್ವೀಕರಿಸುವಾಗ ಹಿಡಿದಿದ್ದರು. ಇದರ ಬೆನ್ನಲ್ಲೇ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಇನ್ಸ್ಪೆಕ್ಟರ್ ಭೀಮಪ್ಪ ತಮ್ಮ ವರ್ತನೆಯಿಂದ ಸಾರ್ವಜನಿಕರ ವಿರೋಧ ಕಟ್ಟಿಕೊಂಡಿದ್ದರು. ಅಲ್ಲದೇ ಪಿಎಸ್ಐ ವಿರುದ್ಧ ಹಲವು ಆರೋಪ ಕೇಳಿಬಂದಿದ್ದವು. ಇದೀಗ ಲೋಕಾಯುಕ್ತಕ್ಕೆ ಬಲೆಗೆ ಬೀಳುತ್ತಿದ್ದಂತೆಯೇ ಜನರು ಫುಲ್ ಖುಷ್ ಆಗಿದ್ದಾರೆ. ಇನ್ನು ಇನ್ಸ್ಪೆಕ್ಟರ್ ಏನೆಲ್ಲಾ ಕೆಟ್ಟ ಕೆಲಸ ಮಾಡಿದ್ದಾರೆ ಎನ್ನುವುದನ್ನು ಸಾಕ್ಷಿ ನೀಡುತ್ತೇವೆ. ಹೀಗಾಗಿ ಎಸ್ಪಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಈ ಘಟನೆ ಅಚ್ಚರಿ ಮೂಡಿಸಿದೆ. ಯಾಕಂದ್ರೆ, ಓರ್ವ ಪಿಎಸ್ಐ ಲೋಕಾಯುಕ್ತ ಬಲಿಗೆ ಬಿದ್ದಿದ್ದರಿಂದ ಈ ಪರಿ ಸಂಭ್ರಮಾರಣೆ ಮಾಡುತ್ತಿರುವುದು ಅಪರೂಪ. ಇದರ ಅರ್ಥ ಪಿಎಸ್ಐ ಕಾರ್ಯವೈಖರಿ ತೋರಿಸುತ್ತಿದೆ.
For More Updates Join our WhatsApp Group :



