ಬೆನ್ನಿಗೆ ಚೂರಿ ಹಾಕಿದ ಬೆಸ್ಟ್ ಫ್ರೆಂಡ್.!

ಬೆನ್ನಿಗೆ ಚೂರಿ ಹಾಕಿದ ಬೆಸ್ಟ್ ಫ್ರೆಂಡ್.!

ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲು.

ಬೆಂಗಳೂರು : ರಾಜ್ಯದಲ್ಲಿ ಗಂಡನನ್ನು ಬಿಟ್ಟು ಬೇರೊಬ್ಬನ ಜತೆಗೆ ಓಡಿ ಹೋಗಿರುವ ಪ್ರಕರಣಗಳೇ ವರದಿಯಾಗುತ್ತಿದೆ. ಬೆಂಗಳೂರು, ಮಂಡ್ಯದಲ್ಲಿ ಇಂದು ಬೆಳಿಗ್ಗೆಯಿಂದ ಎರಡು ಪ್ರಕರಣಗಳು ಪತ್ತೆಯಾಗಿದೆ. ಇದೀಗ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಿಮ್ ಟ್ರೈನರ್ ಒಬ್ಬರಿಗೆ ಸ್ವಂತ ಸ್ನೇಹಿತನೇ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. “ಅವನು ನನಗೆ ಅಣ್ಣನ ಸಮಾನ” ಎಂದು ಪತಿ ನಿತೇಶ್‌ಗೆ ಹೇಳುತ್ತಿದ್ದ ಪತ್ನಿಯು ಈಗ ಅದೇ ಸ್ನೇಹಿತನ ಜೊತೆ ನಾಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.

ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು. ನವೀನ್‌ನ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಪತ್ನಿ ಚಾಟಿಂಗ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ ನಿತೇಶ್, ನಂತರ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು.

 “ನಾನು ಯಾವುದೇ ಕಾರಣಕ್ಕೂ ಗಂಡನ ಜೊತೆ ಹೋಗಲ್ಲ, ಬದಲಾಗಿ ಪಿಜಿ (PG) ಹೋಗುತ್ತೇನೆ” ಎಂದು ಯುವತಿ ಹಠ ಹಿಡಿದಿದ್ದಾಳೆ.ಇದರಿಂದ ಕಂಗೆಟ್ಟಿರುವ ನಿತೇಶ್, “ನನಗೆ ಮೋಸವಾಗಿದೆ, ನ್ಯಾಯ ಕೊಡಿಸಿ” ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಜಯನಗರ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *